ಜೀವನ ದರ್ಶನ ಮಾಸಿಕ ಕಾರ್ಯಕ್ರಮದಲ್ಲಿ ಡಾ.ಜೆ.ಎಸ್.ಪಾಟೀಲ,

ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ  ಪ್ರಸ್ತುತ ಮಾಸಿಕದ ಜೀವನ ದರ್ಶನದ ಕಾರ್ಯಕ್ರಮವು ದಿನಾಂಕ ೧೪-೦೯-೨೦೧೫ ಸೋಮವಾರ ದಂದು ಬೆಳಿಗ್ಗೆ ೧೦-೦೦ ಗಂಟೆಗೆ ಮಹಾವಿದ್ಯಾಲಯದ ಗ್ರಂಥಾಲಯದ ಮುಂಭಾಗದಲ್ಲಿ ಜರುಗಿತು.
    ಜೀವನ ದರ್ಶನದ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಮಾನ್ಯಶ್ರೀ ಡಾ. ಜೆ.ಎಸ್. ಪಾಟೀಲ, ವಿಶ್ರಾಂತ ಕುಲಪತಿಗಳು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಅವರು ಉಪನ್ಯಾಸ ನೀಡುತ್ತ ವಿದ್ಯಾರ್ಥಿಗಳು ಭಾರತದ ಇತಿಹಾಸ, ಸಂಪ್ರದಾಯ, ಸಂಸ್ಕೃತಿಗಳಲ್ಲಿ ಅಡಗಿರುವ ಮಾನವೀಯ ಮೌಲ್ಯಗಳನ್ನು ಅಧೆsಯನ ಕೈಗೊಳ್ಳಬೇಕು. ಬುದ್ಧ, ಬಸವೇಶ್ವರ, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ ಮತ್ತು ಸತ್ಯ ದರ್ಶನ ಜಾಗತಿಕ ಮೌಲ್ಯಗಳಾಗಿದ್ದು ಇಡೀ ಭಾರತದ ಸಂಸ್ಕೃತಿಯನ್ನು ಈ ಎರಡು ಮೌಲ್ಯಗಳು ಪ್ರತಿನಿಧಿಸುತ್ತವೆ. ವಿಶ್ವದ ವಿವಿಧ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಯುವಜನತೆ ಯಾವ ವಿಷಯದಲ್ಲೂ ಕಡಿಮೆ ಇಲ್ಲ. ತಮ್ಮಲಿರುವ ಕೀಳರಿಮೆಯನ್ನು ಕಿತ್ತೊಗೆದು ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರ ಕನಸಾದ ವಿಜನ್ ೨೦-೨೦ ಯನ್ನು ಸಾಕಾರಗೊಳಿಸಲು ಸನ್ನದ್ಧರಾಗಬೇಕು. ಈ ಶತಮಾನದಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರ ವ್ಯಕ್ತಿತ್ವ, ಮಹಾತ್ಮ ಗಾಂಧಿ ಪ್ರತಿಪಾದಿಸಿದ ಎಲ್ಲಾ ಮೌಲ್ಯಗಳ ಒಟ್ಟೂ ರೂಪದಂತಿತ್ತು. ಡಾ. ಕಲಾಂರವರು ಅತಿಯಾಗಿ ಪ್ರೀತಿಸುತ್ತಿದ್ದ ವಿದ್ಯಾರ್ಥಿ ಬಳಗವು ಕಲಾಂರವರ ಕನಸನ್ನು ಸಾಕಾರಗೊಳಿಸುವ ಹೊಣೆ ಹೊರಬೇಕು.
    ಜೀವನದಲ್ಲಿ ಸಕಾರಾತ್ಮಕ ಮನೋಭಾವ ಧೈರ್ಯ, ಆತ್ಮವಿಶ್ವಾಸಗಳ ಮತ್ತು ಕಠಿಣ ಪರಿಶ್ರಮಗಳ ಬಗೆಗಿನ ಇತಿಹಾಸದಲ್ಲಿನ ಉದಾಹರಣೆಗಳನ್ನು ಉದಾಹರಿಸುತ್ತ ವಿದ್ಯಾರ್ಥಿಗಳು ಇಂತಹ ಗುಣಗಳನ್ನು ಅಳವಡಿಸಿಕೊಂಡರೆ ಖಂಡಿತ ಯಶಸ್ಸು ಸಾಧ್ಯ ಎಂದು ವಿವರಿಸಿದರು. ಪ್ರಸ್ತುತ ಶತಮಾನದಲ್ಲಿಯೂ ಕೂಡ ಗಾಂಧಿ
    ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್’ನ ಕಾರ್ಯದರ್ಶಿಗಳಾದ ಶ್ರೀಯುತ ಎಸ್.ಮಲ್ಲಿಕಾರ್ಜುನರವರು, ಆಡಳಿತಾಧಿಕಾರಿಗಳಾದ ಡಾ. ಆರ್. ಮರೆಗೌಡ ಹಾಗೂ ಪ್ರಾಚಾರ್ಯರಾದ ಪ್ರೊ. ಎಂ.ಎಸ್.ದಾದ್ಮಿ, ಪ್ರೊ. ಹೆಚ್.ಪರೀಕ್ಷಿತರಾಜ್, ಪ್ರಕಾಶ ಬಡಿಗೇರ, ರಾಜರಾಜೇಶ್ವರರಾವ್ ಮತ್ತು ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್’ನ ಅಡಿಯಲ್ಲಿನ ವಿವಿಧ ಮಹಾವಿದ್ಯಾಲಯಗಳ ೩೦೦೦ ವಿದ್ಯಾರ್ಥಿಗಳು ಉಪನ್ಯಾಸವನ್ನು ಆಲಿಸಿದರು. ಉಪನ್ಯಾಸದ ನಂತರ ವಿದ್ಯಾರ್ಥಿಗಳೊಂದಿಗೆ ಡಾ.ಜೆ.ಎಸ್. ಪಾಟೀಲರವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
    ಕಾರ್ಯಕ್ರಮದ ಪ್ರಾರಂಭದಲ್ಲಿ ಕು. ಶಕುಂತಲಾ ಪ್ರಾರ್ಥಿಸಿದರು. ಶ್ರೀಮತಿ ಶಾರದಮ್ಮ ವ್ಹಿ.ಕೊತಬಾಳ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಶ್ಲೋಕವನ್ನು ಪಠಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಪ್ರೊ. ಶರಣಬಸಪ್ಪ ಬಿಳೆಎಲಿ ನಿರ್ವಹಿಸಿದರು.

ತತ್ವಗಳಿಗೆ ಜಾಗತಿಕ ಮನ್ನಣೆ ಇದೆ. ಇಂತಹ ತತ್ವಗಳನ್ನು ನೀಡಿದ ದೇಶ ನಮ್ಮದು ಎನ್ನುವ ಅಭಿಮಾನ ವಿದ್ಯಾರ್ಥಿಗಳಲ್ಲಿ ಒಡಮೂಡಬೇಕು.

Please follow and like us:
error