fbpx

ಅಂತರ ಕಾಲೇಜು ಕ್ರೀಡಾಕೂಟ: ಪ್ರಶಸ್ತಿ ಬಾಚಿಕೊಂಡ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು

ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಪ್ಟಂಬರ್ ೨೬ ಹಾಗೂ ೨೭ ರಂದು  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ  ಅಂತರ ಕಾಲೇಜುಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.                  ೧೦೦ ಮೀಟರ ಓಟದಲ್ಲಿ ಪ್ರಥಮ ಸ್ಥಾನ ಮಂಜುನಾಥ ಬುಡಕುಂಟಿ, ೨೦೦ ಮೀಟರ ಓಟದಲ್ಲಿ ಪ್ರಥಮ ಸ್ಥಾನ ಮಂಜುನಾಥ ಬುಡಕುಂಟಿ, ೪೦೦ ಮೀಟರ ಓಟದಲ್ಲಿ ಹನುಮವ್ವ ತೃತೀಯ ಸ್ಥಾನ, ೧೫೦೦ ಮೀಟರ ಓಟದಲ್ಲಿ ಆನಂದ ದ್ವೀತಿಯ ಸ್ಥಾನ, ಹ್ಯಾಮರ್ ಥ್ರೋ ನಲ್ಲಿ ಪ್ರಥಮ ಸ್ಥಾನ ಪರಶುರಾಮ ಗುಗ್ಗರಿ, ದ್ವೀತಿಯ ಸ್ಥಾನ ಶಿವಕುಮಾರ, ಜಾವಲಿಂಗ್ ಥ್ರೋನಲ್ಲಿ ಪರಶುರಾಮ ಗುಗ್ಗರಿ ದ್ವೀತಿಯ ಸ್ಥಾನ, ಲಾಂಗ್ ಜಂಪ್‌ನಲ್ಲಿ ಸುಜಾತಾ ದ್ವೀತಿಯ ಸ್ಥಾನ, ೪*೧೦೦ ಮೀಟರ್ ಓಟದಲ್ಲಿ  ಪ್ರಥಮ ಸ್ಥಾನವನ್ನು ಪರಶುರಾಮ ಗುಗ್ಗರಿ, ಮಂಜುನಾಥ ಬುಡಕುಂಟಿ, ರಮೇಶ, ಶರಣಗೌಡ  ಕ್ರಮವಾಗಿ ಪಡೆದಿರುತ್ತಾರೆ.

         ಈ ಕ್ರೀಡಾಕೂಟವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಬಂಡಿಹರ್ಲಾಪುರ ಸಂಘಟಿಸಿತ್ತು. ಈ ಸಾಧನೆಗೈದ ವಿದ್ಯಾರ್ಥಿಗಳಿಗೆ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿಗಳು ಆಶಿರ್ವದಿಸಿದ್ದಾರ. ಎಸ್.ಜಿ. ಟ್ರಸ್ಟ ಕಾರ್ಯದರ್ಶಿಗಳಾದ ಎಸ್ ಮಲ್ಲಿಕಾರ್ಜುನ, ಆಡಳಿತಾಧಿಕಾರಿಯಾದ ಮರೆಗೌಡರು,  ಪ್ರಾಚಾರ್ಯ ಎಸ ಎಲ್ ಮಾಲಿಪಾಟೀಲ, ದೈಹಿಕ ನಿರ್ದೇಶಕರಾದ ಈಶಪ್ಪ ದೊಡ್ಮನಿ ಹರ್ಷವ್ಯಕ್ತಪಡಿಸಿದ್ದಾರೆ 
Please follow and like us:
error

Leave a Reply

error: Content is protected !!