ಶಾಸಕರಿಂದ ರೂ.೨೦ ಲಕ್ಷದ ಸಿಸಿ ರಸ್ತೆಗೆ ಭೂಮಿ ಪೂಜೆ

ಕೊಪ್ಪಳ:೦೪, ಕ್ಷೇತ್ರದ ಕಾತರಕಿ-ಗುಡ್ಲಾನೂರು ಗ್ರಾಮದಲ್ಲಿ ಹೆಚ್.ಕೆ.ಡಿ.ಬಿ ಅನುಧಾನದ ಅಡಿಯಲ್ಲಿ ರೂ.೨೦ ಲಕ್ಷದ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ನನ್ನ ಕ್ಷೇತ್ರದ ಪ್ರತಿಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ನನ್ನ ಗುರಿಯಾಗಿದ್ದು, ಹಂತ-ಹಂತವಾಗಿ ಪ್ರತಿ ಗ್ರಾಮಗಳನ್ನು ಗ್ರಾಮವಿಕಾಸ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸುವೇನು. ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ರೂ.೭೦ ಕೋಟಿ ಮಂಜೂರಾಗಿದ್ದು, ಶೀಘ್ರವೇ ಬೂದಿಹಾಳ ಮತ್ತು ಡಂಬ್ರಳ್ಳಿ ಗ್ರಾಮಗಳಿಗೆ ರೂ.೧೨ ಕೋಟಿಯ ಬ್ರಿಜ್ ಕಮ್‌ಬ್ಯಾರೇಜ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಮುರ್ಲಾಪುರ ಗ್ರಾಮಕ್ಕೆ ರೂ.೨ ಕೋಟಿಯ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗುವುದು. ಹುಲಿಗಿ ಗಿಣಿಗೇರಾ ಮುನಿರಾಬಾದ್ ಗ್ರಾಮಗಳಲ್ಲಿ ರಸ್ತೆ ಅಗಲೀಕರಣ ಮಾಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ಬರುವ ದಿನಗಳಲ್ಲಿ ಹೆಚ್.ಕೆ.ಡಿ.ಬಿ ಅನುಧಾನದ ಅಡಿಯಲ್ಲಿ ೩೦ ಗ್ರಾಮಗಳಲ್ಲಿ ಗುಣಮಟ್ಟದ ಸಿಸಿ ರಸ್ತೆ ಕಾಮಗಾರಿಗಳ ನಿರ್ಮಾಣ ಮಾಡಲಾಗುವುದು ಎಂದು ಹೇಳಿ ಗ್ರಾಮಗಳ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಎಮ್.ಎಫ್. ಅಧ್ಯಕ್ಷ ವೆಂಕನಗೌಡ್ರು ಹಿರೇಗೌಡ್ರು, ಗ್ರಾ.ಪಂ. ಅಧ್ಯಕ್ಷರಾದ ಮಲ್ಲಮ್ಮ ಮಾಂತಪ್ಪನವರು, ಪಕ್ಷದ ಮುಖಂಡರಾದ ಈಶಪ್ಪ ಮಾದಿನೂರು, ಗಾಳೆಪ್ಪ ಪೂಜಾರ, ಓಜನಹಳ್ಳಿ ಗ್ರಾ.ಪಂ. ಅಧ್ಯಕ್ಷ ಯಮನೂರಪ್ಪ ನಾಯಕ್, ರಾಮಣ್ಣ ಹದ್ದಿನ್, ಕೃಷ್ಣ ಗಲಬಿ, ಬಸವನಗೌಡ್ರು ಕರೆಡ್ಡಿ, ಯಲ್ಲನಗೌಡ್ರು, ಶಿವಾನಂದ ಹೂದ್ಲೂರು, ಗುರುಬಸವರಾಜ ಹಳ್ಳಿಕೇರಿ, ಬೀಮಶೇಪ್ಪ ಭೂಚನಹಳ್ಳಿ, ನಜೀರ್ ಅಳವಂಡಿ, ನಾರಾಯಣ ರೆಡ್ಡಿ ಬಿಸರಳ್ಳಿ, ಬಾಳಪ್ಪ ಬಿಸರಳ್ಳಿ, ಹನುಮಂತಪ್ಪ ಗಡ್ಡಿ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.
Please follow and like us:
error