ಬಿಜೆಪಿ ವಿಜಯೋತ್ಸವ ಆಚರಣೆ ; ಜಿಗುಪ್ಸೆ ಮೂಡಿಸಿದ ಸದನದ ನಡವಳಿಕೆ


ಜಿಲ್ಲೆಯಲ್ಲೆಡೆ ಜನರು ಟಿವಿ ಮುಂದೆಯೆ ಕುಳಿತಿದ್ದರು. ಟೆಸ್ಟ್ ಮ್ಯಾಚ್ ಗಿಂತ ಹೆಚ್ಚು ಆಸಕ್ತಿಯಿಂದ ಟಿ ವಿ ನೋಡುತ್ತಿದ್ದರು.ಎಲ್ಲರ ಬಾಯಲ್ಲೂ ಯಡಿಯೂರಪ್ಪನವರೇ , ಸರಕಾರ ಉಳಿಯುತ್ತಾ ಇಲ್ಲಾ ಎನ್ನುವ ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿದ್ದರು. ವಿಧಾನ ಸೌದದಲ್ಜಲಿ ಜನಪ್ರತಿನಿಧಿಗಳು ನಡೆದುಕೊಂಡ ರೀತಿ , ಅವರ ಮಾತುಗಳು ,ಅಸಭ್ಯ ವರ್ತನೆ ಜನರಲ್ಲಿ ಜಿಗುಪ್ಸೆ ಮೂಡಿಸಿತು.
ಬಹುಮತ ಸಾಭೀತು ಪಡಿಸಿದ್ದರಿಂದ ಖುಷಿಗೊಂಡ ಬಿಜೆಪಿಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೈಕ್ ರಾಲಿ ಮಾಡುತ್ತ ಯಡಿಯೂರಪ್ಪನವರಿಗೆ ಜಯಘೋಷ ಕೂಗಿದರು. ಕೊಪ್ಪಳ ನಗರದ ಅಶೋಕ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡರು. ಚಿತ್ರ ಕೃಪೆ : ಗಲ್ಪ್ ಕನ್ನಡಿಗ
Please follow and like us:
error