fbpx

ಕನ್ನಡ ಡಿಂಡಿಮ ವಿಶೇಷ ಪ್ರಚಾರಾಂದೋಲನಕ್ಕೆ ಸಚಿವ ಶಿವರಾಜ ತಂಗಡಗಿ ಚಾಲನೆ.

ಕೊಪ್ಪಳ
ನ. ೦೧ (ಕ ವಾ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನ್ನಡ
ನಾಡು ನುಡಿ, ಕರ್ನಾಟಕ ರಾಜ್ಯದ ಅಭಿವೃದ್ಧಿಯನ್ನು ಬಿಂಬಿಸುವ ಕುರಿತು ಜಿಲ್ಲೆಯಲ್ಲಿ ೨೦
ದಿನಗಳ ಕಾಲ ಹಮ್ಮಿಕೊಂಡಿರುವ ‘ಬಾರಿಸು ಕನ್ನಡ ಡಿಂಡಿಮವ’ ವಿಶೇಷ ಪ್ರಚಾರಾಂದೋಲನಕ್ಕೆ
ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು
ಜಿಲ್ಲಾ ಕ್ರೀಡಾಂಗಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
    
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗ

ಳಿನಲ್ಲಿ ಜಿಲ್ಲೆಯಾದ್ಯಂತ ಕನ್ನಡ
ನಾಡಿನ ಹಿರಿಮೆ, ಗರಿಮೆಯನ್ನು ಬಿಂಬಿಸುವ ಹಾಗೂ ಕರ್ನಾಟಕ ರಾಜ್ಯದ ಅಭಿವೃದ್ಧಿಯನ್ನು
ನಾಡಿನ ಜನತೆಗೆ ತಿಳಿಸುವ ವಿಶೇಷ ಪ್ರಚಾರಾಂದೋಲನವನ್ನು ವಾರ್ತಾ ಮತ್ತು ಸಾರ್ವಜನಿಕ
ಸಂಪರ್ಕ ಇಲಾಖೆಯು ಹಮ್ಮಿಕೊಂಡಿದೆ.  ಜಿಲ್ಲೆಯಲ್ಲಿ ೨೦ ದಿನಗಳ ಕಾಲ ವಿಶೇಷ
ಪ್ರಚಾರಾಂದೋಲನ ಜರುಗಲಿದ್ದು, ಪ್ರತಿದಿನ ೦೫ ಗ್ರಾಮಗಳಲ್ಲಿ ಈ ವಿಶೇಷ ವಾಹನ ಸಂಚರಿಸಿ,
ಮಾಹಿತಿಯನ್ನು ಪ್ರಚುರಪಡಿಸಲಿದೆ.  ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ
ಹಿಟ್ನಾಳ್, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ,
ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿ ಕೃಷ್ಣ ಉದಪುಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ,
ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಡಿವೈಎಸ್‌ಪಿ ರಾಜೀವ್, ಜಿಲ್ಲಾ ವಾರ್ತಾಧಿಕಾರಿ
ತುಕಾರಾಂರಾವ್ ಬಿ.ವಿ., ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್
ಸೇರಿದಂತೆ ಹಲವು ಗಣ್ಯಾತಿಗಣ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!