ಮ್ಯಾರಾಥಾನ್ ಅಂದರೇ ಏನು ?
ಮ್ಯಾರಾಥಾನ್ ಓಟ ? ಅದು ನಮ್ಮಂತಹ ಹಿಂದುಳಿದ ಜಿಲ್ಲೆಯಲ್ಲಿ ಏರ್ಪಡಿಸುವುದು ಸಾಧ್ಯವೇ?
ಸಾಧ್ಯವಿದೆ ಎಂದು ಕಳೆದ ನಾಲ್ಕು ವರ್ಷಗಳಿಂದ ಸಾಭೀತ ಮಾಡುತ್ತಿದೆ ಕುಕನೂರಿನ ಕುಶ್ ಸಂಸ್ಥೆ .
ಈ ಮ್ಯಾರಾಥಾನ್ನ ಖರ್ಚು ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ,ಪ್ರಾಯೋಜಕತೆಯನ್ನು ಅಮೇರಿಕಾದಲ್ಲಿ ನೆಲೆಸಿರುವ ನಮ್ಮ ಭಾನಾಪೂರದವರೇ ಆದ ಮೆಹಬೂಬ ಪಾಷಾ ವಹಿಸಿಕೊಂಡು ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೆಹಬೂಬ ಪಾಷಾ ಇಂದು ಅಮೇರಿಕಾದ ಎಂಫಸಿಸ್ ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿದ್ದು ತಮ್ಮಿಂದ ಸಮಾಜಕ್ಕೆ ಮಾಡಬಹುದಾದ ಎಲ್ಲ ಸೇವೆಯನ್ನು ನಿಸ್ವಾರ್ಥದಿಂದ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಕುಕನೂರಿನ ಕುಶ್ ಸಂಸ್ಥೆಯ ಗೆಳೆಯರ ಬಳಗ ಹಾಗೂ ಹಿರಿಯರ ಬೆಂಬಲ, ಸಹಕಾರವಿದೆ. ಅವರೆಲ್ಲರೂ ಮೆಹಬೂಬಪಾಷಾ ಅಮೇರಿಕೆಯಲ್ಲಿದ್ದರೂ ಇಲ್ಲಿ ಮ್ಯಾರಾಥಾನ್ ಸ್ಪರ್ಧೆ ನಡೆಯುವಂತೆ ನೋಡಿಕೊಂಡಿದ್ದಾರೆ.
ಪ್ರತಿ ವರ್ಷ ಮ್ಯಾರಾಥಾನ್ ವಿಜೇತರಿಗೆ ನೀಡುವ ಬಹುಮಾನದ ಮೊತ್ತವನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. ಈ ವರ್ಷ ೫ ಕಿ.ಮಿ.ಮ್ಯಾರಾಥಾನ್ ವಿಜೇತರಿಗೆ ಪ್ರಥಮ ರೂ. ೧೦೦೦೦, ದ್ವಿತೀಯ ರೂ.೫೦೦೧ ಹಾಗೂ ತೃತೀಯ ರೂ.೩೦೦೦-೦೦ ಬಹುಮಾನ ನೀಡಲಾಗುತ್ತಿದೆ.ಅದೇ ರೀತಿ ೬೦೦ ಮೀಟದ ಓಟಕ್ಕೆ ಪ್ರಥಮ ರೂ. ೨೦೦೦ ದ್ವಿತೀಯ ರೂ. ೧೫೦೧ ಹಾಗೂ ತೃತಿಯ ೧೦೦೧ ರೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಮೆಹಬೂಬ್ ಪಾಷಾ ಕೇವಲ ಮ್ಯಾರಾಥಾನ್ ಅಷ್ಟೇ ಅಲ್ಲದೇ ಹಲವಾರು ಬಡ ಪ್ರತಿಭಾವಂತ ಮಕ್ಕಳಿಗೆ ಓದಲು ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಹಲವಾರು ಜನರಿಗೆ ತಮ್ಮ ಕೈಲಾದ ಸಹಾಯವನ್ನು ನೀಡುತ್ತಿದ್ದಾರೆ. ತಮ್ಮ ಸೇವೆಗೆ ಪ್ರಚಾರ ಬಯಸದ ಮೆಹಬೂಬ ಪಾಷಾ ಎಲೆಯ ಮರೆಯ ಕಾಯಿಯಂತೆ ಸದ್ದುಗದ್ದಲವಿಲ್ಲದೇ ತಮ್ಮ ಸೇವೆಯನ್ನು ನಡೆಸಿಕೊಂಡು ಬಂದಿದ್ದಾರೆ.

ಮೆಹಬೂಬ ಪಾಷಾ ಹಾಗೂ ಅವರ ಗೆಳೆಯರ ಬಳಗ,ಕುಶ್ ಸಂಸ್ಥೆಯ ಬೆನ್ನು ತಟ್ಟಿ ಪ್ರೋತ್ಸಾಹಿಸಲು ಕುಕನೂರಿಗೆ ಬನ್ನಿ
ಎಲ್ಲರೂ ಭಾಗವಹಿಸಿ … ಮ್ಯಾರಾಥಾನ್ ಯಶಸ್ವಿಗೊಳಿಸಿ !!
ಹೆಚ್ಚಿನ ವಿವರಗಳಿಗೆ : bpurexpress.blogspot.com, bhanapurexpress.com, bhanapurexpress.blogspot.com ಗೆ ಭೇಟಿ ನೀಡಿ.
–
Please follow and like us: