೩೩ ನೇ ಬೆಳಕಿನೆಡೆಗೆ ಕಾರ್ಯಕ್ರಮ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದಲ್ಲಿ ಲಿಂ.ಶ್ರೀ.ಮ.ನಿ.ಪ್ರ.ಜ ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪ್ರತಿ ಅಮವಾಸ್ಯೆಯ ಅಂಗವಾಗಿ ನೆಡೆಯುವ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ದಿನಾಂಕ ೧೯-೦೬-೨೦೧೨  ಮಂಗಳವಾರ ಸಾಯಂಕಾಲ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ಜರುಗಲಿದೆ. ಸಾನಿಧ್ಯವನ್ನು ಶ್ರೀ.ಮ.ನಿ.ಪ್ರ.ಜ.ಅನ್ನದಾನೇಶ್ವರ ಮಹಾಸ್ವಾಮಿಗಳು ಮುಂಡರಗಿ ಪೂಜ್ಯರು ವಹಿಸಿದ್ದಾರೆ. ಇದೇ ವೇದಿಕೆಯಲ್ಲಿ ಕಂಪ್ಲಿಯ ಕು.ಎಸ್.ಎಸ್.ಎಂ. ರುದ್ರಾಣಿ ಇವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಲಿದೆ.  ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಡಾ.ಅಂದಾನಪ್ಪ ಬಳ್ಳೊಳ್ಳಿ ಸಹೋದರರು ಹಾಗೂ ವೀರಬಸಪ್ಪ ಬಳ್ಳೊಳ್ಳಿಯವರ ಪುತ್ರರು ವಹಿಸಿರುತ್ತಾರೆ. ಶ್ರೀಮಠದ ಸದ್ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.
Please follow and like us:
error