ವೈದ್ಯಕೀಯ ಕಾಲೇಜು ಪ್ರಕ್ರಿಯೆ ತೀವ್ರಗತಿಯಲ್ಲಿ ಚಾಲನೆ ನೀಡಲು ಬಿಜೆಪಿ ಆಗ್ರಹ

 ಕೊಪ್ಪಳಕ್ಕೆ ಮಂಜೂರಾದ ವೈದ್ಯಕೀಯ ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸುವದು ಹಾಗೂ ತೀವ್ರಗತಿಯಲ್ಲಿ ಚಾಲನೆ ನಿಡದೇ ಇದ್ದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಬಂದ ಕರೆ ಹಮ್ಮಿಕೊಳ್ಳುವ ಬಗ್ಗೆ.
         ಈ ಮೆಲಿನ ವಿಷಯಕ್ಕೆ ಸಂಭಂಧಿಸಿದಂತೆ, ಕಳೆದ  ಘನ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ೭ ಹೂಸ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಮಂಜೂರಾತಿ ನೀಡಿ ಆದೇಶಿಸಿದೆ.
        ಅದರಲ್ಲಿ ಹಿಂದೂಳಿದ ಹೈದ್ರಾಬಾದ್ ಕರ್ನಾಟಕದ ನಮ್ಮ ಕೊಪ್ಪಳ ಜಿಲ್ಲೆಯೂ ಒಂದು. ಈಗಾಗಲೇ ಸದರಿ ಕಾಲೇಜು ಕಟ್ಟಡ ನಿರ್ಮಾಣ ಮಾಡಲು  ನಿವೇಶನ ಖರೀದಿಗೆ ೭ ಕೋಟಿ ಅನುದಾನ ಸಹ ಬಿಡುಗಡೆ ಗೊಂಡಿರುತ್ತದೆ. 
        ಜುಲೈ ೮ ರ ವಿಜಯವಾಣಿ ಪತ್ರಿಕೆಯೂಂದರಲ್ಲಿ ವೈದ್ಯಕೀಯ ಕಾಲೇಜು ನನೆಗುದಿಗೆ, ಹಣಕಾಸು ಇಲಾಖೆ ಹಸಿರು ನಿಶಾನೆ ತೋರಿಲ್ಲ ಜುಲೈ ೩೧ ರೂಳಗೆ ಭಾರತೀಯ ವೈದ್ಯಕೀಯ ಪರಿಷತ್‌ಗೆ ಹಣಕಾಸು ಇಲಾಖೆ ನಿರಾಕ್ಷೇಪಣಾ ಪತ್ರ ಸಲ್ಲಿಸಿದ್ದೇ ಆದಲ್ಲಿ ತುಮಕೂರು, ಮಡಿಕೇರಿ ಹಾಗೂ ಚಿತ್ರದುರ್ಗದಲ್ಲಿ ಮಾತ್ರ ಹೂಸ ಕಾಲೇಜು ಸ್ಥಾಪನೆ ಸಾದ್ಯವಾಗಲಿದೆ ಎಂದು ಟಿ.ಗಂಗಾಧರಗೌಡ, ನಿರ್ದೇಶಕರು, ಸರ್ಕಾರಿ ವೈದ್ಯಕೀಯ ಕಾಲೇಜು ಇವರು ಹೇಳಿಕೆ ನೀಡಿದ್ದಾರೆ.
       ಒಂದು ವಿಪರ್ಯಾಸ ಸಂಗತಿ ಏನೇಂದರೇ, ಒಂದು ಕಡೆ ನಾವು ಹೈದ್ರಾಬಾದ್ ಕರ್ನಾಟಕದ ಮೀಸಲಾತಿ ಕಲಂ ೩೭೧ (ಜೆ)ಬಗ್ಗೆ ಹೋರಾಟ ನಡೆಸುತ್ತಿದ್ದೆವೇ. ಮಂಜೂರಾತಿಯಾದ ಹೂಸ ವೈದ್ಯಕೀಯ ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗದಿರುವ ಬಗ್ಗೆ ಬಹಳ ವಿಷಾಧಕರ ಸಂಗತಿಯಾಗಿದೆ. 
     ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು  ಸಂಭಂದ ಪಟ್ಟ ಸಚಿವರು, ಸಂಭಂದ ಪಟ್ಟ ಇಲಾಖೆಯ ಅಧಿಕಾರಿಗಳು ತಮ್ಮ ಸರ್ಕಾರ ಬಂದ ೨ ತಿಂಗಳ ಆಡಳಿತ ಅವಧಿಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ದೂರದೃಷ್ಠಕರ ಸಂಗತಿಯಾಗಿದೆ. ಆ ಕಾರಣ ತಕ್ಷಣ ಅನುಮೋದನೆ ನೀಡಿ ಈ ಭಾಗದ ಬಡವರ ಕನಸು ನನಸು ಮಾಡಲು ಹಿಂದಿನ ಸರ್ಕಾರ ಪರಿಶ್ರಮ ಪಟ್ಟಿದೆ. ಈಗೀನ ಸರ್ಕಾರವು ಬಡ ವಿದ್ಯಾರ್ಥಿಗಳ ಕನಸು ಹಾಗೂ ಬಡ ರೋಗಿಗಳ ಕನಸು ಭಗ್ನ ಗೊಳಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಕಾರಣ ತೀವ್ರಗತಿಯಲ್ಲಿ ಸದರಿ ಕಾಲೇಜನ್ನೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಿ ಹೈದ್ರಾಬಾದ್ ಕರ್ನಾಟಕ ಕಲಂ ೩೭೧ (ಜೆ) ಅಡಿಯಲ್ಲಿ ಬರುವ ಈ ಭಾಗದ ವಿದ್ಯಾರ್ಥಿಗಳ ವೈದ್ಯಕೀಯ ವ್ಯಾಸಂಗ ಮಾಡಲು ಹಾಗೂ ಬಡ ರೋಗಿಗಳ ಹೆಚ್ಚಿನ ಚಿಕಿತ್ಸೆಗೆ ಅನುವು ಮಾಡಿ ಕೋಡದಿದ್ದ ಪಕ್ಷದಲ್ಲಿ ದಿನಾಂಕಃ- ೧೫-೦೭-೨೦೧೩ ರ ಸೋಮವಾರದಂದು ಕೊಪ್ಪಳ ಜಿಲ್ಲಾ ಬಂದಗೆ ಕರೆಕೊಡಲಾಗುವದೆಂದು  ತಿಳಿಸಿದೆ.

Related posts

Leave a Comment