ಸಂಸ್ಕೃತಿ ಪ್ರಕಾಶನದಿಂದ ನಾಳೆ ಸಂಸ್ಕೃತಿ ಸಂವಾದ

ಬಳ್ಳಾರಿ, ಸೆ. ೧೧: ನಗರದ ಸಂಸ್ಕೃತಿ ಪ್ರಕಾಶನ ಸಾಹಿತ್ಯ, ಕಲೆ, ಇತಿಹಾಸ, ಪರಂಪರೆ, ಸಂಸ್ಕೃತಿ, ಕ್ರೀಡೆ ಮತ್ತಿತರ ವಿಷಯಗಳ ಕುರಿತು ಸಾಂಸ್ಕೃತಿಕ ಲೋಕದ ಗಣ್ಯರಿಂದ ಚಿಂತನ ಮಂಥನ, ಪುಸ್ತಕ ವಿಮರ್ಶೆ, ವಿಶೇಷ ಉಪನ್ಯಾಸ ಆಯೋಜಿಸಲು ‘ಸಂಸ್ಕೃತಿ ಸಂವಾದ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ.
ಮೊದಲ ಸಂಸ್ಕೃತಿ ಸಂವಾದ ಕಾರ್ಯಕ್ರಮ ಸೆ. ೧೨ ರಂದು ಗುರುವಾರ ನಗರದ ಮರ್ಚೇಡ್ ರೆಸಿಡೆನ್ಸಿ ಸಭಾಂಗಣದಲ್ಲಿ ಬೆ. ೧೦-೧೫ ಕ್ಕೆ ಸಾಹಿತಿ ಡಾ. ಅಶ್ವತ್ಥ ಕುಮಾರ್ ಅವರ ‘ಭಾವನಾತ್ಮಕ ಬದುಕು’ ಕೃತಿ ಕುರಿತು ಸಂವಾದ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮಂಗಳೂರಿನ ಪಶು ತಜ್ಞ ವೈದ್ಯ ಡಾ. ಮನೋಹರ ಉಪಾಧ್ಯ ಅವರು ಚಾಲನೆ ನೀಡುವರು. ಎಂದು ಪತ್ರಕರ್ತ, ಸಂಸ್ಕೃತಿ ಪ್ರಕಾಶನದ ಸಿ ಮಂಜುನಾಥ್ ತಿಳಿಸಿದ್ದಾರೆ.
ಪಶುಪಾಲನ ಮತ್ತು ಪಶು ವೈದ್ಯಸೇವಾ ಇಲಾಖೆಯ ಬಳ್ಳಾರಿ ಜಿಲ್ಲಾ ಉಪ ನಿರ್ದೇಶಕ ಡಾ. ಜೆ ಎಸ್ ಪಂಪಾಪತಿ ಅವರು ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಸಿರುಗುಪ್ಪ ಸೃಜನಾ ಫೌಂಡೇಷನ್ ಸಂಚಾಲಕರೂ ಆಗಿರುವ ಶಸ್ತ್ರ ಚಿಕಿತ್ಸಕ ಡಾ. ಮಧುಸೂಧನ ಕಾರಿಗನೂರು, ಪರಿಸರವಾದಿ ಸಂತೋಷ್ ಮಾರ್ಟಿನ್, ಉದ್ಯಮಿ ಇಂ. ಎಂ ಜಿ ಗೌಡ, ಪಶು ವೈದ್ಯ ಡಾ. ಟಿ ಶಶಿಧರ್, ಹಗರಿ ಕೃಷಿ ಕೇಂದ್ರದ ಪಶು ತಜ್ಞ ಡಾ. ಬಿ ಕೆ ರಮೇಶ್ ಅವರು ಪಾಲ್ಗೊಳ್ಳಲಿದ್ದಾರೆ.

Leave a Reply