ಜಿಲ್ಲಾ ಉತ್ತಮ ಶಿಕ್ಷಕರಾಗಿ ಸತ್ಯಪ್ಪ ಸೋಂಪುರಗೆ ಪ್ರಶಸ್ತಿ ಪ್ರಧಾನ

ಕೊಪ್ಪಳ,ಅ.೧೧: ಹುಳ್ಕಿಹಾಳ ನೆಹರು ವಿದ್ಯಾಸಂಸ್ಥೆ ನೀಡಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಯಲಬುರ್ಗಾ ತಾಲೂಕಿನ ಲಕಮಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸತ್ಯಪ್ಪ ಸೋಂಪುರ ಭಾಜನರಾಗಿದ್ದು ಅವರಿಗೆ ಇತ್ತಿಚೆಗೆ ಕಾರಟಗಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿನ ಅವರ ಅಪಾರ ಸೇವೆಗೆ ಈ ಗೌರವ ಸಲ್ಲಿಸಲಾಗಿದೆ ಎಂದು ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಶಿವಲಿಂಗಪ್ಪ, ಲತಾ, ಜಗನಾಥಸ್ವಾಮಿ, ಶಾಂತಪ್ಪ, ಶಂಕ್ರಪ್ಪ, ವಿರೇಂದ್ರ, ಬಸವರಾಜ ಮತ್ತು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಊರಿನ ಗುರು ಹಿರಿಯರು ಸ್ಥಳದಲ್ಲಿದ್ದು ಅಭಿನಂದಿಸಿದರು.
Please follow and like us:
error