ಪುಸ್ತಕದಲ್ಲಿ ಕಲಿಕೆಇಲ್ಲ ಸಮಾಜದಲ್ಲಿ ಕಲಿಕೆಯಿದೆ.- ಸುರೇಶಕುಮಾರ ಸನ್ನದ

        ಪುಸ್ತಕದಲ್ಲಿ ಕಲಿಕೆ ಇಲ್ಲಾ ಸಮಾಜದಲ್ಲಿ ಕಲಿಕೆ ಇದೆ. ಭಾರತದ ಅಭಿವೃದ್ದಿಗೆ ರೈತರ ಕೊರತೆ ಇದೆ. ಇಂದಿನ ಯುವಕರು ರಾಷ್ಟ್ರ ಅಭಿವೃದ್ದಿಗೆ ಓದಬೇಕು. ವಿದ್ಯಾರ್ಥಿಗಳು ದೇಶಾಭಿಮಾನಕ್ಕೆ ಒತ್ತು ಕೊಡಬೇಕು. ಮಾತೃಭೂಮಿ ಋಣ ತೀರಿಸಲು ಮುಂದಾಗಬೇಕು. ಜೀವನದಲ್ಲಿ ಮುಂಬರುವ ಭವಿಷ್ಯತ್ತಿಗೆ ಇಂಗ್ಲೀಷ ಕಲಿಕೆ ಅವಶ್ಯವಾಗಿದೆ ಎಂದು ಕೊಪ್ಪಳ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕರಾದ ಸುರೇಶಕುಮಾರ ಸನ್ನದರವರು ಹಲಗೇರಿ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸರಕಾರ ನೆಹರು ಯುವ ಕೇಂದ್ರ, ಶಾಂಭವಿ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ(ರಿ), ಯುವ ಸಾಂಸ್ಕ್ರತಿಕ ಸಂಘ(ರಿ) ಕೊಪ್ಪಳ, ಪೇರಣಾ ಯುವತಿ ಸಂಘ(ರಿ) ಕೊಪ್ಪಳ ಮತ್ತು ವಂದೇಮಾತರಂ ಸೇವಾ ಸಂಘ(ರಿ) ಕೊಪ್ಪಳ ಇವುಗಳ ಸಂಯುಕ್ತ ಆಶ್ರಯಗಳಲ್ಲಿ ಕೊಪ್ಪಳ ತಾಲೂಕು ಮಟ್ಟ ಯುವ ಸಂಘಗಳ ಸಬಲೀಕರಣ ಕಾರ‍್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು. ಕಾರ‍್ಯಕ್ರಮ ಉದ್ಘಾಟನೆಯನ್ನು ಗ್ರಾಮದ ಹಿರಿಯರಾದ ರಾಯನಗೌಡ ಪಾಟೀಲ ನೇರವೆರಿಸಿದರು. ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಸ್ಥಳೀಯ ಪ್ರೌಢಶಾಲೆ ಗೋಪಾಲಕೃಷ್ಣ ಅಡಿವಿ, ಉಪನ್ಯಾಸಕರಾದ ಷರೀಪಾಬೇಗಂ, ಶ್ರೀನಿವಾಸ ಸಿದ್ದರೆಡ್ಡಿ ಮೇಟಿ, ಶಾಂಭವಿ ಸಂಘದ ಅಧ್ಯಕ್ಷರಾದ ಶಿವನಗೌಡ ಹಲಗೇರಿ ಆಗಮಿಸಿದ್ದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಂಶುಪಾಲರಾದ  ಕೃಷ್ಣರಾವ್ ದೇಸಾಯಿ ವಹಿಸಿದ್ದರು.
                  ಪ್ರಸ್ತಾವಿಕವಾಗಿ ಮಾತನಾಡಿದ ವಂದೇಮಾತರಂ ಸೇವಾ ಸಂಘದ ಸಂಸ್ಥಾಪಕರಾದ ರಾಕೇಶ ಕಂಬ್ಲೇಕರನವರು ಸಾಮಾಜಿಕ ಕಾಳಜಿಗೆ ಯುವ ಸಂಘಗಳು ದುಡಿಯಬೇಕು. ಯುವಶಕ್ತಿ ದೇಶಕ್ಕೆ ಭದ್ರ ಬುನಾದಿ ಹಾಕಬೇಕೆಂದರು. ಕಾರ‍್ಯಕ್ರಮ ನಿರೂಪಣೆಯನ್ನು ಯುವ ಸಾಂಸ್ಕೃತಿಕ ಶಿಕ್ಷಣಾಭಿವೃದ್ದಿಸಂಘದ ಅಧ್ಯಕ್ಷರಾದ ಆನಂದ ಹಳ್ಳಿಗುಡಿ ನೇರವೆರಿಸಿದರು. ಶ್ರೀನಿವಾಸ ಸ್ವಾಗತಿಸಿದರು. ಕೊಪ್ಪಳ ತಾಲೂಕಿನ ರಾಷ್ಟ್ರೀಯ ಯುವಪಡೆಯಾದ ರೇಖಾ ಪಾತ್ರದ ಪ್ರಾರ್ಥಸಿದ್ದರು.   ಸಿದ್ದರೆಡ್ಡಿ ಮೇಟಿ ವಂದಿಸಿದರು ಎಂದು ಗಂಗಾವತಿ ತಾಲೂಕಿನ ರಾಷ್ಟ್ರೀಯ ಯುವಪಡೆಯಾದ ಮಂಜುನಾಥ ಬೇಟಗೇರಿ ಪತ್ರಿಕಾ ವರದಿ ನೀಡಿದ್ದಾರೆ.
Please follow and like us:
error