೧೩ ರಂದು ಅದ್ದೂರಿಯಾಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

  ಪ್ರಥಮ ಬಾರಿಗೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರ  ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ರಾಜ್ಯ ಸರಕಾರ ನಿಧರಿಸಿದ್ದು ಸಂತಸ ತಂದಿದೆ ಎಂದು ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸತ್ಯಪ್ಪ ಬೋವಿ, ಪ್ರಧಾನ ಕಾರ್ಯದರ್ಶಿ, ಬಸವರಾಜ ಭೋವಿ ವಣಗೇರಿ ತಿಳಿಸಿದ್ದಾರೆ. 
  ದಿ: ೧೦ ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತಿರ್ಮಾನಿಸಲಾಗಿದೆ. 
ದಿನಾಂಕ ೧೩ ರಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರದ ಮೆರವಣಿಗೆಯನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡುವರು. ನಂತರ ಮೆರವಣಿಗೆಯು ಜವಾಹರ್ ರಸ್ತೆ ಮೂಲಕ ಸಾಹಿತ್ಯ ಭವನ ತಲುಪುವದು. ಈ ಕಾರ್ಯಕ್ರಮದಲ್ಲಿ ಎಲ್ಲರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಬೋವಿ ಸಮಾಜದ ಉಪಾಧ್ಯಕ್ಷ ಸುಚಪ್ಪ ಬೋವಿ, ಸಂಚಾಲಕ ನಿಂಗಪ್ಪ ಬೋವಿ, ಗೌರವಾಧ್ಯಕ್ಷ ರೇವಣಪ್ಪ ವಜ್ರಬಂಡಿ, ನಗರಸಭೆ ಮಾಜಿ ಸದಸ್ಯ ರಾಮಣ್ಣ ಪೂಜಾರ, ಅಜ್ಜಪ್ಪ ಗುನ್ನಾಳ, ಯಮನೂರಪ್ಪ ಬೋವಿ ಮತ್ತಿತರರು ತಿಳಿಸಿದ್ದಾರೆ. 
Please follow and like us:
error

Related posts

Leave a Comment