ಇಟಿಗಿ ಉತ್ಸವದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕೆ ಕಲಾ ತಂಡಗಳ ಆಹ್ವಾನ

ಕೊಪ್ಪಳ, ಡಿ. ೦೨ : ಡಿ. ೧೯, ೨೦ ಮತ್ತು ೨೧, ೨೦೧೪ರಂದು ೧೦ನೇ ಬಾರಿಗೆ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ನಡೆಯಲಿರುವ ಇಟಿಗಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಲು ಕಲಾ ತಂಡಗಳನ್ನು ಆಹ್ವಾನಿಸಿದೆ.
ಮಹಾದೇವ ದಂಡನಾಯಕ ವೇದಿಕೆಯಲ್ಲಿ ಪ್ರದರ್ಶನ ನೀಡಲು ವಿವಿಧ ಸಾಂಸ್ಕೃತಿಕ ಪ್ರಕಾರಗಳಾದ ಭರತನಾಟ್ಯ,  ನೃತ್ಯ ರೂಪಕ, ಜನಪದ ನೃತ್ಯ, ಸಮೂಹ ನೃತ್ಯ, ಸಿನಿಮಾ ನೃತ್ಯ, ಜನಪದ ಗಾಯನ, ಸುಗಮ ಸಂಗೀತ, ತತ್ವಪದ, ಜಾನಪದ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಳನ್ನು ನಾಟಕ, ದೊಡ್ಡಾಟ, ಬಯಲಾಟ, ಮಹಿಳಾ ನೃತ್ಯ, ಗ್ರಾಮೀಣ ನೃತ್ಯ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ಭಜನೆ, ಚಿತ್ರಕಲೆ ಮುಂತಾದ ಕಲಾ ಪ್ರದರ್ಶನ ನೀಡಬಯಸುವ ಕಲಾವಿದರು ೯೫೩೮೮೨೫೧೭೩, ೯೮೪೫೩೩೮೧೬೦, ೯೨೪೨೮೬೩೦೫೦ ಈ  ದೂರವಾಣಿಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬುದಾಗಿದೆ. ಪ್ರದರ್ಶನ ನೀಡುವ ಕಲಾವಿದರಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು ಎಂದು ಇಟಿಗಿ ಉತ್ಸವ ಸಾಂಸ್ಕೃತಿಕ ಕಾರ್ಯದರ್ಶಿ ವೈ. ಬಿ. ಜೂಡಿ ತಿಳಿಸಿದ್ದಾರೆ.

Leave a Reply