ನಗರಸಭೆ ಗುತಿಗೆ ಕಾರ್ಮಿಕರ ಧರಣಿ ೬ನೇ ದಿನಕ್ಕೆ

ನಗರಸಭೆಯ ಅಧಿಕಾರಿಗಳ ಹಠಮಾರಿತನದಿಂದ ನಗರಸಭೆಯಲ್ಲಿ ದುಡಿಯುತ್ತಿರುವ ೧೪೦ ಜನ ಗುತ್ತಿಗೆ ಪೌರ ಕಾರ್ಮಿಕರು ಆರು ತಿಂಗಳುಗಳಿಂದ ವೇತನ ಇಲ್ಲದೇ ಬೀದಿಪಾಲಾಗಿದ್ದಾರೆಂದು ಭಾರದ್ವಾಜ್  ತಿಳಿಸಿದ್ದಾರೆ.
        ಗಂಗಾವತಿ ನಗರಸಭೆಯ ಪೌರಾಯುಕ್ತರು ಮತ್ತು ಕೆಲ ಜನ ಜನಪ್ರತಿನಿಧಿಗಳ ಹಠಮಾರಿತನದಿಂದ ಕಾನೂನುಬಾಹಿರವಾಗಿ ೧೪೦ ಜನ ಗುತಿಗೆ ಪೌರ ಕಾರ್ಮಿಕರು ಬೀದಿಪಾಲು ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ಗುತ್ತಿಗೆದಾರರಿಲ್ಲದೇ ನೇರವಾಗಿ ಪೌರ ಕಾರ್ಮಿಕರಿಂದ ಸೇವೆ ಮಾಡಿಸಿಕೊಳ್ಳುತ್ತಿರುವ ನಗರಸಭೆ ಅಧಿಕಾರಿಗಳು ಮುನ್ಸಿಪಲ್ ಕಾಯ್ದೆಗಳನ್ನು ಮತ್ತು ಜಿಲ್ಲಾಡಳಿತ ಆದೇಶಗಳನ್ನು ಗಾಳಿಗೆ ತೂರಿ ಅಧಿಕಾರ ನಡೆಸುತ್ತಿದ್ದಾರೆ.  ಧರಣಿ ನಿರತರನ್ನು ಉದ್ದೇಶಿಸಿ ಸಿಂಧನೂರು ಕಾ|| ಹೆಚ್.ಎನ್. ಬಡಿಗೇರ ಜಾತಿ ನಿರ್ಮೂಲನಾ ವೇದಿಕೆ ರಾಜ್ಯ ಸಂಚಾಲಕರು ಮಾತನಾಡಿ ಶಾಸಕರು, ಸಂಸದರು ಮತ್ತು ನಗರಸಭೆ ಅಧಿಕಾರಿಗಳು ಕಾರ್ಮಿಕರಿಗೆ ನೇರವಾಗಿ ಅನ್ಯಾಯ ಮಾಡಿದ್ದಾರೆ. ಕಾರ್ಮಿಕರ ಬಗ್ಗೆ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ. ಕಾರ್ಮಿಕರ ಹೋರಾಟಕ್ಕೆ ಬೆಂಬಲಿಸುವುದಾಗಿ ಮತ್ತು ಮುಂದಿನ ದಿನಗಳಲ್ಲಿ ರೂಪಿಸುವ ಉಗ್ರ ಹೋರಾಟಗಳಲ್ಲಿ ನೇರವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ದಿನಾಂಕ ೧೨-೦೨-೨೦೧೫ ರ ಗುರುವಾರರಿಂದ ಕಾರ್ಮಿಕರು ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ. ಅಂದೇ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ಮಾಡುವುದಾಗಿ ಭಾರಧ್ವಾಜ್ ತಿಳಿಸಿದ್ದಾರೆ.
Please follow and like us:
error