You are here
Home > Koppal News > ಹೆತ್ತವರ ಕೀರ್ತಿ ತನ್ನಿ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಹೆತ್ತವರ ಕೀರ್ತಿ ತನ್ನಿ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ- ಮೇ-೦೪, ಬೆಳಗ್ಗೆ ೧೦-೩೦ಕ್ಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಹಾಗೂ ವಿವಿಧ ಒಕ್ಕೂಟಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ವಿದ್ಯಾರ್ಥಿಗಳ ಜೀವನವು ಸುವರ್ಣ ಜೀವನವಾಗಿರುತ್ತದೆ. ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಯಾವುದೇ ದುಶೄಟಗಳಿಗೆ ಬಲಿಯಾಗದೇ ತಮ್ಮನ್ನು ಈ ಮಟ್ಟಕ್ಕೆ ಬೆಳೆಯಲು ಪಾಲನೆ ಪೋಷಣೆ ಮಾಡಿದ ತಂದೆ-ತಾಯಿಗಳ ಅನನ್ಯ ಸೇವೆಯನ್ನು ಮರೆಯದೆ ಅವರ ಕಷ್ಟಕಾರ್ಪಣ್ಯಗಳಿಂದ ನಿಮ್ಮನ್ನು ಓದಿಸಿದ ಅವರಿಗೆ ಕೀರ್ತಿ ತರುವಂತಹ ಮಕ್ಕಳಾಗಿ ಇದರ ಶ್ರೇಯಸ್ಸು ನಿಮ್ಮ ಕುಟುಂಬಕ್ಕೂ ಹಾಗೂ ನಾಡಿಗೆ ಸಲ್ಲಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ತಪ್ಪು ದಾರಿಗೆ ಹೋಗದೇ ನೀವು  ಶಿಕ್ಷಣ ಪಡೆದ ಕಾಲೇಜಿಗೆ ನಿಮಗೆ ವಿದ್ಯ ಕಲಿಸಿದ ಗುರುಗಳಿಗೆ ನಿಮ್ಮ ಯಶಸ್ಸಿನ ಶ್ರೇಯ ಸಲ್ಲುವಂತೆ ಮಾಡಿ ಉತ್ತಮ ನಾಗರೀಕರಾಗಿ ಸಮಾಜದಲ್ಲಿ ಬಾಳಿ ಸೌಹಾರ್ಧತೆಯ ನಿರ್ಮಾಣ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಅದಮ್ಯ ಕರ್ತವ್ಯವೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಕಾಲೇಜಿನ ಕೀರ್ತಿತಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಮಾಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಕಾಲೇಜಿನ ಪ್ರಾಂಶುಪಾಲರಾದ ಎಸ್.ಬಿ.ಶಾಂತಪ್ಪನವರ, ಕ್ರೀಡಾ ಕಾರ್ಯಾಧ್ಯಕ್ಷರಾದ ಶೋಭಾ ಕೆ.ಎಸ್. ವಿಶೇಷ ಉಪನ್ಯಾಸಕರಾದ ಡಾ||ಎಂ.ಎಲ್.ಗುಳೇದಗುಡ್ಡ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ವೃಂದ ಉಪಸ್ಥಿತರಿದ್ದರು.

Leave a Reply

Top