ಕಾಟ್ರಳ್ಳಿ ಗ್ರಾಮದಲ್ಲಿ ಬಿ.ಟಿ ಹತ್ತಿ ಬೇಸಾಯ ತರಬೇತಿ

ಕೊಪ್ಪಳ ಜೂ. ೨೫ – ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾಲೂಕಿನ ಕಾಟ್ರಳ್ಳಿ ಗ್ರಾಮದಲ್ಲಿ ರೈತರಿಗೆ ಬಿ.ಟಿ ಹತ್ತಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಯಿತು.ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ ಅವರು, ಬಿಟಿ ಹತ್ತಿ ಬೇಸಾಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ವಾತಾವರಣದಲ್ಲಿನ ಏರುಪೇರು, ನೀರಿನ ಸೂಕ್ತ ಬಳಕೆ, ರೋಗಗಳು ಮತ್ತು ಅವುಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಬೇಸಾಯ ಕ್ರಮಗಳು ಮತ್ತು ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಬೇಸಾಯ ಶಾಸ್ತ್ರ ತಜ್ಞ ಯೂಸುಫಲಿ ನಿಂಬರಗಿ ವಿವರಿಸಿದರು. ವಿಷಯ ತಜ್ಞ ರೋಹಿತ್ ಕೆ.ಎ ಹಾಗೂ ಸುಧಾಕರ್ ಟಿ ಸಹ ಭಾಗವಹಿಸಿ ಮಾಹಿತಿ ನೀಡಿದರು.  ತರಬೇತಿಯಲ್ಲಿ ರೈತರಾದ ದಳಪತಿ, ರಾಚಯ್ಯ ಶಾಂತವೀರಯ್ಯ ಮತ್ತು ಗ್ರಾಮದ ಇತರರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮಾರುತೆಪ್ಪ ಡಂಬಳ ಅವರ ಹತ್ತಿ ಹೊಲಕ್ಕೆ ಡಾ. ಎಂ.ಬಿ ಪಾಟೀಲ ಮತ್ತು ಸಿಬ್ಬಂದಿ ಭೇಟಿ ನೀಡಿ ಬೆಳೆಯನ್ನು ಪರಿಶೀಲಿಸಿ, ರೈತರಿಗೆ ಮಾಹಿತಿ ನೀಡಿದರು.

Please follow and like us:
error