ಗಣೇಶ ಮೂರ್ತಿ ಪ್ರತಿಷ್ಠಾಪನೆ : ೨೦೧೩ರ ಪ್ರಶಸ್ತಿ ಪ್ರಕಟ

ಕೊಪ್ಪಳ, ೧೩- ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವೈವಿದ್ಯಮಯ ಹಾಗೂ ಉತ್ತಮ ಸಂದೇಶ ನೀಡುವ ಪ್ರತಿಷಾಪನೆಗಳಿಗೆ ಪ್ರತಿ ವರ್ಷದಂತೆ ಈ ಭಾರಿಯೂ ಪ್ರಶಸ್ತಿ ನೀಡಲಾಗುತ್ತಿದೆ.
ಕಳೆದ ಮೂರು ವರ್ಷಗಳಂತೆ ನಗರಸಭೆ ಮಾಜಿ ಅಧ್ಯಕ್ಷ ಸುರೇಶ ದೇಸಾಯಿ ಮೂರ್ತಿ ಪ್ರತಿಷ್ಠಾಪನೆ ಸಮಿತಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಶಸ್ತಿ ನಿಡುತ್ತಾ ಬಂದಿದ್ದು ಈ ಭಾರಿ ಸಹ ಪ್ರಶಸ್ತಿ ನೀಡಲಿದ್ದಾರೆ.
ಪ್ರಥಮ : ಆಯ್ಕೆ ಸಮಿತಿಯ ನಿರ್ಧಾರದಂತೆ ಪ್ರಥಮ ಬಹುಮಾನ ಶ್ರೀ ವಿಠ್ಠಲ ವಿನಾಯಕ ಉತ್ಸವ ಮಂಡಳಿ, ಪಾಂಡುರಂಗ ದೇವಸ್ಥಾನ ಇವರು ಸತತ ಎರಡನೇ ಭಾರಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ದ್ವಿತೀಯ : ಈ ಭಾರಿ ದ್ವಿತೀಯ ಬಹುಮಾನವನ್ನು ಕೇತೇಶ್ವರ ಯುವಕ ಮಿತ್ರ ಮಂಡಳಿ ಹಾಗೂ ಬಿ.ಟಿ. ಪಾಟೀಲ ನಗರದ ಗೌರಿಸುತ ಮಿತ್ರ ಮಂಡಳಿ ಪಡೆದುಕೊಂಡಿವೆ.
ತೃತೀಯ : ತೃತೀಯ ಬಹುಮಾನವನ್ನು ಶಾರದಾ ಟಾಕೀಜ ಹಿಂದುಗಡೆ ಇರುವ ಕೊಪಣಾಚಲೇಶ್ವರ ಗಳೆಯರ ಬಳಗ ಹಾಗೂ ಮಿಟ್ಟಿಕೇರಿ ಓಣಿಯ ಏಕದಂತಾ ವಿನಾಯಕ ಮಿತ್ರ ಮಂಡಳಿ ಪಡೆದುಕೊಂಡಿವೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಸಂತೋಷ ದೇಶಪಾಂಡೆ ತಿಳಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಹುಲಗಪ್ಪ ಕಟ್ಟಿಮನಿ, ಪರಶುರಾಮ ಮ್ಯಾಳಿ, ರಮೇಶ ಮಲ್ಲಪ್ಪ ತುಪ್ಪದ್, ಮಂಜುನಾಥ ಅಂಗಡಿ, ಗಣೇಶ ಮೂರ್ತಿ ವೀಕ್ಷಿಸಿ ಪ್ರಶಸ್ತಿ ಆಯ್ಕೆಗೆ ಶ್ರಮಿಸಿದ್ದಾರೆ.
Please follow and like us:
error