fbpx

ಆಟೋ ಚಾಲಕರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ.

ಕೊಪ್ಪಳ – ನಗರದ ಹಸನ್ ರಸ್ತೆಯಲ್ಲಿರುವ ಕೊಪ್ಪಳ ತಾಲೂಕ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯಾಲಯದಲ್ಲಿ ಶನಿವಾರ ಬೆಳಿಗ್ಗೆ ೬೯ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂಭ್ರಮದಿಂದ ಮಾಡಲಾಯಿತು.
    ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್‌ರವರು ಸಂಘದ ಪರವಾಗಿ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ಸ್ಮರಣೆ ಪ್ರತಿಯೊಬ್ಬರು ಮಾಡಬೇಕು. ಅವರ ತ್ಯಾಗ ಬಲಿದಾನದಿಂದ ಸಿಕ್ಕಿರುವ ಸ್ವಾತಂತ್ರ್ಯವನ್ನು ನಾವು ಉಳಿಸಿ-ಬೆಳೆಸಿಕೊಂಡು ಹೋಗುವುದರ ಜೊತೆಗೆ ಮಕ್ಕಳಿಗೆ ಆದರ್ಶಗಳ ತಿಳಿಸಬೇಕೆಂದು ಕೆ.ಎಂ.ಸಯ್ಯದ್ ಹೇಳಿದರು.  ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಮರ್ಧಾನಸಾಬ ಕೊತ್ವಾಲ್, ಅಧ್ಯಕ್ಷ ಶಿವಸಂಗಪ್ಪ ವಣಿಗೇರಿ, ಉಪಾಧ್ಯಕ್ಷ ಖಾಜಾಸಾಬ ಡ್ರೈವರ್, ಕಾರ್ಯದರ್ಶಿ ಜಾವೀದ್ ಮಂಗಳೂರು, ಸಹ ಕಾರ್ಯದರ್ಶಿ ಗೋವಿಂದ ರಾಜ್, ಸಂಘಟನಾ ಕಾರ್ಯದರ್ಶಿ ಹಸನಸಾಬ್, ಖಜಾಂಚಿ ರಾಘು ಕೆರೆಹಳ್ಳಿ, ಸಲಹೆಗಾರರು ಹಾಗೂ ಪದಾಧಿಕಾರಿಗಳಾದ ಅಬ್ಬಾಸ್ ಅಲಿ ಕೊತ್ವಾಲ್, ಸಲೀಂ ಗುಡಗೇರಿ, ಮರ್ಧಾನಸಾಬ ಬನ್ನಿಕೊಪ್ಪ, ಇಸ್ಮಾಯಿಲ್ ಅರಗಂಜಿ, ನಜೀರ್ ಸಾಬ ಎಂಟಿಎಂ, ನಜೀರ್ ಮುಜಾವರ (ಹೀನಾ), ಮೌಲಾಹುಸೇನ ಮತ್ತಿತರರು ಪಾಲ್ಗೊಂಡಿದ್ದರು. ಅದರಂತೆ ಹಳೇ ಡಿಸಿ ಕಛೇರಿ ಸರ್ಕಲ್ ಬಳಿ ಇರುವ ಆಟೋ ಚಾಲಕರ ಸಂಘದ ಕಾರ್ಯಾಲಯದಲ್ಲಿಯೂ ಕೂಡ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು.

Please follow and like us:
error

Leave a Reply

error: Content is protected !!