ಸಾಯಿ ಭಿಕ್ಷಾ ಕೇಂದ್ರದಿಂದ ಬೇಸಿಗೆ ಫಿಲ್ಟರ್ ಅರವಟಿಗೆ.

ಕೊಪ್ಪಳ, ಏ. ೨೦. ನಗರದ ಡಾ|| ಅಂಬೇಡ್ಕರ್ ವೃತ್ತದಲ್ಲಿ ಬೇಸಿಗೆ ನಿಮಿತ್ಯ ಫಿಲ್ಟರ್ ನೀರಿನ ಅರವಟಿಗೆಯನ್ನು ಕೇಂದ್ರದ ಸಂಸ್ಥಾಪಕರು, ಮುದ್ರಾ ರಹಸ್ಯ ಖ್ಯಾತಿಯ ಮುದ್ರಾ ರತ್ನ ಶ್ರೀ ಲಕ್ಷ್ಮೀಶ್ರೀನಿವಾಸ ಗುರೂಜಿ ಪ್ರಾರಂಭಿಸಿದರು. ಅವರು ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರ, ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಮತ್ತು ಡಾ|| ಬಿ. ಆರ್. ಅಂಬೇಡ್ಕರ ಯುವಕ ಸಂಘಗಳ ವತಿಯಿಂದ ಉದ್ಘಾಟಿಸಿ ಶುಭಕೋರಿದರು. ನೀರಿನ ದಾನವೂ ದಾನಗಳಲ್ಲಿ ಶ್ರೇಷ್ಟವಾದದ್ದು, ಅನೇಕ ಪಾಪ ಕರ್ಮಗಳನ್ನು ಅದರಿಂದ ಕಳೆದುಕೊಳ್ಳಬಹುದು ಎಂದರು. ಮೇ ೩ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವೈಜ್ಞಾನಿಕ ಸ್ವರೂಪದ ಮತ್ತು ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಒಂದು ಲಕ್ಷ ಜನರನ್ನು ಸೇರಿಸಿ ಉಚಿತವಾಗಿ ಮಹಾ ಪ್ರತ್ಯಂಗೀರಾ ಯಾಗವನ್ನು ಮಾಡುವ ಮೂಲಕ ಜನರಿಗೆ ಆಗುತ್ತಿರುವ ಮಾಟ ಮಂತ್ರಗಳ ಕಾಟಗಳಿಂದ ಮುಕ್ತಿ ನೀಡಲಾಗುವದು, ಪ್ರತಿಯೊಬ್ಬರೂ ಒಂದಿಲ್ಲೊಂದು ದೋಷಗಳಿಂದ ನರಳುತ್ತಿರುವದಕ್ಕೆ ಯಾಗದಲ್ಲಿ ಪಾಲ್ಗೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಲು ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದರು.ಅರವಟಿಗೆಯ ಪ್ರಾಯೋಜಕರಾದ ವಿಶ್ವ ಪ್ರಿಂಟರ್‍ಸ್‌ನ ಮಂಜುನಾಥ ಜಿ. ಗೊಂಡಬಾಳ, ಐಶ್ವರ್ಯ ಪ್ರಿಂಟರ್‍ಸ್‌ನ ಆನಂದ ಗೊಂಡಬಾಳ, ನರಸಿಂಹಮೂರ್ತಿ ಆನಂದಕರ್, ಸಂತೋಷ ಭಾಗ್ಯನಗರ, ರಮೇಶ ಬೆಲ್ಲದ ಮುಂತಾದವರು ಇದ್ದರು.

Related posts

Leave a Comment