ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಸಮಾರೋಪ ಉದ್ಯಮಿ ಎಂ.ಎ.ವಲಿಸಾಹೇಬ್‌ರಿಂದ ಬಹುಮಾನ ವಿತರಣೆ.

ಕೊಪ್ಪಳ-30- ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಕಾನೂನು ಮಹಾವಿದ್ಯಾಲಯಗಳ ರಾಜ್ಯಮಟ್ಟದ ಕಬ್ಬಡ್ಡಿ ಸಮರೋಪ ಕಾರ್ಯಕ್ರಮ ಜರುಗಿತು. ಅನ್ಮೋಲ್ ಗ್ರುಪ್ ಆಫ್ ಕಂಪನಿಯ ಚೇರ್‍ಮನ್, ಉದ್ಯಮಿ ಎಂ.ಎ.ವಲಿಸಾಹೇಬ್, ಕರ್ನಾಟಕ ರಾಜ್ಯ ಕಾನೂನು ಮಹಾ ವಿದ್ಯಾಲಯದ ಕ್ರೀಡಾ ನಿರ್ದೇಶಕ ಖಲೀದ್‌ಖಾನ್ ಹಾಗೂ ಪ್ರಾಂಶುಪಾಲರಾದ ಬಿ.ಎಸ್.ಅನಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಉಡುಪಿಯ ವೈಕುಂಟ ಬಾಳಿಗ ಕಾನೂನು ಮಹಾವಿದ್ಯಲಯ ಪ್ರಥಮ ಸ್ಥಾನ ಪಡೆದುಕೊಂಡರೆ, ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆಯಿತು. ಜಮಖಂಡಿಯ ಕಾನೂನು ಮಹಾವಿದ್ಯಾಲಯ ತೃತೀಯ ಸ್ಥಾನಕ್ಕೆ ತೃಪ್ತಿ ಹೊಂದಿತ್ತು. ಒಟ್ಟು ೨೨ ಕಾನೂನು ಮಾಹಾವಿದ್ಯಾಲಯಗಳ ತಂಡಗಳು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದವು ದೇಸಿ ಕ್ರೀಡೆ ಕಬಡ್ಡಿ ಇಲ್ಲಿನ ಜನಮನ ರಂಜಿಸಿತು. ಈ ಸಂದರ್ಭದಲ್ಲಿ ರಾಜ್ಯ ಕಾನೂನು ಮಹಾವಿದ್ಯಾಲಯಗಳ ಕ್ರೀಡಾ ನಿರ್ದೇಶಕ ಖಲೀದ್‌ಖಾನ್ ಬಹುಮಾನ ವಿತರಿಸಿ ಮಾತನಾಡಿ, ದೇಶಿ ಪಂದ್ಯಾ ಕಬ್ಬಡ್ಡಿ ಅಪ್ಪಟ ಗ್ರಾಮೀಣ ಕ್ರೀಡೆಯಾಗಿದ್ದು, ಈ ಆಟ ಮೈಗೂಡಿಸಿಕೊಳ್ಳುವುದರಿಂದ ಆತ್ಮ ವಿಶ್ವಾಸದ ಜತೆಗೆ ಬೌದ್ಧಿಕ ವಿಕಸನವಾಗುತ್ತದೆ. ದೇಹ ಸದೃಢವಾಗುತ್ತದೆ. ಆರೋಗ್ಯ ವೃದ್ಧಿ, ಮಾನಸಿಕ ನೆಮ್ಮದಿ ಸಿಗುತ್ತದೆ. ಶಿಕ್ಷಣದ ಜತೆಜತೆಗೆ ಕ್ರೀಡೆಗೂ ವಿದ್ಯಾರ್ಥಿಗಳು ಮಹತ್ವ ನೀಡಬೇಕು. ಆರೋಗ್ಯವಂತ ಜನರಿಂದ ಮಾತ್ರ ಆರೋಗ್ಯವಂತ ಸಮಾಜ
ಕೊಪ್ಪಳ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಹನಸಿ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಆತ್ಮವಿಶ್ವಾಸದ ಪ್ರತೀಕ, ಸೋಲು ಗೆಲುವು ಮುಖ್ಯವಲ್ಲ. ಕೀಳರಿಮೆ ತೊರೆದು ಮೈದಾನದಲ್ಲಿ ತೊಡಗಿಸಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಗುಂಪು ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಸ್ನೇಹ ಶೀಲತೆ ಬೆಳೆಸುತ್ತದೆ. ಅದು ಜೀವನದ ಮುಂದುವರೆಕೆಯ ಭಾಗವೇ ಆಗಿರುತ್ತದೆ. ನಾಯಕತ್ವಗುಣ ಕೂಡಾ ಕ್ರೀಡೆಯಿಂದ ಲಭಿಸುತ್ತದೆ ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಮೈಸೂರಿನ ಬಸವಶ್ರೀ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಎ.ಎಂ.ತೋಂಟದಾರ್ಯ, ಚಿತ್ರದುರ್ಗ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಎ.ಎಂ.ಮುರಗಿ, ಕೊಪ್ಪಳ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ್ ಅಳ್ಳೋಳ್ಳಿ ಸೇರಿದಂತೆ ಇತರರಿದ್ದರು. ಒಟ್ಟಾರೆ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಕ್ರೀಡಾ ಪ್ರೇಮಿಗಳಿ ಹಬ್ಬದೂಟವಾದ್ದಂತು ಸತ್ಯ.

ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು.

Leave a Reply