ಅಗಲಿದ ವೀರಯೋಧನಿಗೆ ಗೌರವಾರ್ಪಣೆ

ಕೊಪ್ಪಳ, ೨೬ : ಇದೇ ನವಂಬರ್ ೦೮-೧೧-೧೪ ರಂದು ಕಾಶ್ಮೀರದಲ್ಲಿ ಗಡಿ ಕಾಯುವ ಸಮಯದಲ್ಲಿ ಉಗ್ರರ ದಾಳಿಗೆ ಬಲಿಯಾಗಿ ದೇಶಕ್ಕಾಗಿ ಪ್ರಾಣತೆತ್ತ ವೀರಯೋಧ ಮಲ್ಲಪ್ಪ ಚನ್ನಳ್ಳಿಯವರ ಹಳ್ಳಿಗುಡಿಯ ಮನೆಗೆ ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಯನ್ ವಿ.ಎಸ್. ಅಗಡಿ ಇತ್ತೀಚಿಗೆ ಭೇಟಿ ನೀಡಿ, ಮೃತ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತ ವೀರಯೋಧ ಮಲ್ಲಪ್ಪ ಚನ್ನಳ್ಳಿಯವರ ಮಗ ಇದೇ ಶಾಲೆಯಲ್ಲಿ ಓದುತ್ತಿದ್ದು, ವಿದ್ಯಾರ್ಥಿಗೂ ಧೈರ್ಯ ಹೇಳಿ ವಿದ್ಯಾಭ್ಯಾಸ ಮತ್ತು ಭವಿಷ್ಯದ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಲಾಯಿತು. ಶಾಲೆಯಲ್ಲಿಯೂ ಮೃತ ಯೋಧನಿಗೆ ಗೌರವಾರ್ಪಣೆ ಸಮರ್ಪಿಸಲಾಯಿತು. ಶಾಲಾ ಪ್ರಾಚಾರ್ಯ ಎ. ಧನಂಜಯನ್ ವೀರಯೋಧರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೇಶಕ್ಕಾಗಿ ತ್ಯಾಗ, ಬಲಿದಾನಗೈದ ಮಲ್ಲಪ್ಪ ಚನ್ನಳ್ಳಿಯವರ ಕುರಿತು ಮಾತನಾಡಿದರು. ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಗಲಿದ ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

Leave a Reply