ಗಿಣಿಗೇರಿ : ಅದಿರು ಇಳಿಸಲು ವಿರೋಧ

ಕೊಪ್ಪಳ ಬಳಿ ಇರುವ ಎಂಎಸ್ ಪಿಎಲ್ ಕೈಗಾರಿಕೆಗೆ ಎನ್ ಎಂಡಿಸಿಯಿಂದ ಬಂದಿರುವ ಅದಿರನ್ನು ಗಿಣಗೇರಿ ಬಳಿ ಇಳಿಸಲು ಗ್ರಾಮಸ್ಥರು ವಿರೋಧಿಸಿದ್ದಾರೆ. ತೀವ್ರ ವಿರೋಧದ ಕಾರಣ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹಾಗೂ ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಿದರು.

ಅನ್ ಲೋಡ್ ಮಾಡುವುದರಿಂದ ಗ್ರಾಮಸ್ಥರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಫ್ಯಾಕ್ಟರಿಗಳಿಂದ ಆರೋಗ್ಯ ಈಗಾಗಲೇ ಏರುಪೇರಾಗುತ್ತಿದೆ. ಆದ್ದರಿಂದ ಅನಲೋಡ್ ಮಾಡಬಾರದು ಎಂದು ಗ್ರಾಮಸ್ಥರು ಪಟ್ಟುಹಿಡಿದರು.
ಸದ್ಯದ ಅನಲೋಡ್ ಕಾರ್ಯ ಮುಗಿಯಲಿ ನಂತರ ಪರಿಶೀಲಿಸಲಾಗುವುದು ಎಂದು ಗ್ರಾಮಸ್ಥರಿಗೆ ಜಿಲ್ಲಾಧಿಕಾರಿಗಳು ಮನವೋಲಿಸಿದ್ದಾರೆ.

Leave a Reply