ಕಿನ್ನಾಳದಲ್ಲಿ ಖಗೋಳ ವಿಕ್ಷಣೆ ಪವಾಡ ಬಯಲು ವಿಜ್ಞಾನ ವಸ್ತು ಪ್ರದರ್ಶನ

  ಕೊಪ್ಪಳ :- ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ತಾಳುಕಿನ ಕಿನ್ನಾಳದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ಇರಕಲ್‌ಗಡಾ ವಲಯ ಮಟ್ಟದ ಶಾಲೆಗಳಿಗೆ ಖಗೋಳ ವಿಕ್ಷಣೆ ಹಾಗೂ ಪವಾಡ ಬಯಲು, ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು ವಲಯದ ೩೫ ಹಿರಿಯ ಪ್ರಾಥಮಿಕ ಶಾಲೆಯಿಂದ ೭೦೦ ವಿದ್ಯಾರ್ಥಿಗಳು  ೧೦೦ ಜನ ಶಿಕ್ಷಕರು  ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮದ ಅದ್ಯಕ್ಷತೆಯನ್ನು ಬೆನಾಳಪ್ಪ ನಿಂಗಾಪೂರ ಎಸ್.ಡಿ.ಎಮ್.ಸಿ.ಅದ್ಯಕ್ಷರು ವಹಿಸಿದ್ದರು. ಕಾರ್ಯಕ್ರಮ ಆಯೋಜಿಸಿದ್ದ   ಸೋಮಶೇಖರ.ಚ. ಹರ್ತಿ ಶಿಕ್ಷಣ ಸಂಯೋಜಕರು ಪ್ರಸ್ತಾವಿಕವಾಗಿ ಮಾತನಾಡಿದರು ಉದ್ಘಾಟನೆಯನ್ನು ನೇರವೆರಿಸಿದ   ಉಮೇಶ ಪೂಜಾರ ಕ್ಷೇತ್ರ ಶಿಕ್ಷಣ ಅಧಿಕಾರಿಗಳು  ಮಾತನಾಡಿ ಖಗೋಳ ವಿಕ್ಷಣೆಯಿಂದ ವಿದ್ಯಾರ್ಥಿಗಳಿಗೆ  ವಿಜ್ಞಾನ ವಿಷಯದಲ್ಲಿ  ಜ್ಞಾನ ಹೆಚ್ಚಲಿದೆ ಎಂದರು.
  ಅಂಬರೇಶ ಕಮ್ಮಾರ ದ್ವೀದಸ ಪರುಣಿತರು ಕ್ಷೆತ್ರ ಶಿಕ್ಷಣಾಧಿಕಾರಿಗಳು ಕಾರ್ಯಲಯ ಕೊಪ್ಪಳ  ಇವರು  ಪವಾಡ ಬಯಲು ಕಾರ್ಯಕ್ರಮ ನೆಡೆಸಿಕೊಟ್ಟರು ಆರ್.ಕೆ.ರಡ್ಡೆರ ಶಿಕ್ಷಕರು ಅನ್ನದಾನೇಶ್ವರ ವಿಜಯ ಪ್ರೌಢಶಾಲೆ ನರೆಗಲ್ಲ, ವಾಯ್.ಬಿ.ಮೇಟಿ ಮುಖ್ಯೊಪಾಧ್ಯಯರು ಸ.ಪ್ರೌ.ಶಾಲೆ.ಗೆದ್ದಗೇರಿ, ಸುನೀಲ ವೈದ್ಯ ಶಿಕ್ಷಕರು ಶಂಕರಲಿಂಗ ಪ್ರೌಢಶಾಲೆ ಹೊಂಬಳ, ಸೂಡಿಮಠ ಮುಖ್ಯೋಪಾಧ್ಯಾಯರು  ಸ.ಪ್ರೌ.ಶಾಲೆ ಹ್ಯಾಟಿ, ರೇವಣಸಿದ್ದಪ್ಪ ಚನ್ನಿನಾಯಕರ, ಬಸವರಾಜ ಪೂಜಾರ, ಸಂಪನ್ಮೂಲ ವ್ಯಕ್ತಿಗಳು ಖಗೋಳ ವಿಕ್ಷಣೆಯ ಕುರಿತು ಮಾಹಿತಿಯನ್ನು ನೀಡಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ೧೦೦ಕ್ಕಿಂತ ಹೆಚ್ಚು ಪ್ರಯೋಗಗಳನ್ನು ಪ್ರದರ್ಶಿಸಲಾಯಿತು. ಇದೇ ಸಂದಂರ್ಭದಲ್ಲಿ ಸರ್.ಸಿ.ವಿ.ರಾಮನ್‌ರ ಕುರಿತು ಉಪನ್ಯಾಸ ನೀಡಲಾಯಿತು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಜೀರಹಮ್ಮದ ಶಿಕ್ಷಕರು ಚಿಲಕಮುಕಿ, ನಾರಾಯಣಪ್ಪ ಚಿತ್ರಗಾರ, ಶಿವು ಜೋಗಿ, ಮಾಲಾ ಪತ್ತಾರ, ಭಾಗವಹಿಸಿದ್ದರು 
  ರಮೇಶ ಲಕ್ಕುಂಡಿ ನಿರೂಪಿಸಿದರು ಪ್ರಭಾಕರ ದೈ.ಶಿ. ವಂದಿಸಿದರು 

Leave a Reply