fbpx

ಆಟೋರಿಕ್ಷಾಗಳಿಗೆ ಸ್ಟಿಕರ್ ಅಳವಡಿಸುವ ಕಾರ್ಯಕ್ಕೆ ಪೊಲೀಸರ ಚಾಲನೆ

 

ಕೊಪ್ಪಳ ನಗರ ಸಂಚಾರ ಪೊಲೀಸ್ ಠಾಣಾ ಆವರಣದಲ್ಲಿ ಇತ್ತೀಚಿಗೆ ನಗರಠಾಣೆಯ ಪಿ.ಐ. ಮೋಹನ ಪ್ರಸಾದ ಅವರ ನೇತೃತ್ವದಲ್ಲಿ ಕೊಪ್ಪಳ ಆಟೋ ರೀಕ್ಷಾ ಮಾಲಕರ ಮತ್ತು ಚಾಲಕರ ಆಟೋಗಳನ್ನು ಸುಲಭವಾಗಿ ಗುರುತಿಸಲು ನಗರದಲ್ಲಿರುವ ಎಲ್ಲಾ ಆಟೋ ರಿಕ್ಷಾಗಳಿಗೆ ಕ್ರಮ ಸಂಖ್ಯೆ ಇರುವ ಸ್ಟಿಕರ್ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಗರಠಾಣೆಯ ಪಿ.ಐ. ಮೋಹನ ಪ್ರಸಾದ ಅವರು ಮಾತನಾಡಿ, ಇತ್ತೀಚಿಗೆ ಜರುಗುತ್ತಿರುವ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಟೋಗಳನ್ನು ಸುಲಭವಾಗಿ ಗುರುತಿಸಲು ನಗರದಲ್ಲಿರುವ ಎಲ್ಲಾ ರಿಕ್ಷಾಗಳಿಗೆ ಕ್ರಮ ಸಂಖ್ಯೆಯನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಉತ್ತಮವಾಗಿ ಸ್ಪಂದಿಸಿದ ಆಟೋ ರಿಕ್ಷಾ ಸಂಘದವರು ನಗರದಲ್ಲಿರುವ ಆಟೋ ರಿಕ್ಷಾಗಳನ್ನು ನೊಂದಣಿ ಮಾಡಿಕೊಂಡು ಅವುಗಳಿಗೆ ಸಂಚಾರ ಪೊಲೀಸ್ ಠಾಣೆ ಮತ್ತು ಕ್ರಮ ಸಂಖ್ಯೆ ಇರುವ ಸ್ಪಿಕರ್ ಹಚ್ಚುವ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಆಟೋ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಶಿವಸಂಗಪ್ಪ ವಣಗೇರಿ, ಗೌರವಾಧ್ಯಕ್ಷ ಮರ್ದಾನಸಾಬ ಕೊತ್ವಾಲ, ಉಪಾಧ್ಯಕ್ಷ ಖಾಜಾಸಾಬ, ಪ್ರಧಾನ ಕಾರ್ಯದರ್ಶಿ ಜಾವೇದ, ಖಜಾಂಚಿ ರಾಘು, ಸಹ ಕಾರ್ಯದರ್ಶಿ ಗೋವಿಂದರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!