ಯುವಕರ ದಷ್ಚಟಗಳಿಂದ ಸಂಸ್ಕೃತಿ ಮರೆಯಾಗುತ್ತಿದೆ; ಶಂಕ್ರಯ್ಯ ಅಬ್ಬಿಗೇರಿಮಠ

ಕೊಪ್ಪಳ: ಇಂದಿನ ಯುವಕರು ಅನೇಕ ದುಷ್ಚಟಗಳಿಗೆ ಬಲಿಯಾಗುತ್ತಿರುವುದರಿಂದ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಹಿರೇಸಿಂದೋಗಿಯ ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾದ   ಶಂಕ್ರಯ್ಯ ಅಬ್ಬಿಗೇರಿಮಠರವರು ನುಡಿದರು. ಅವರು ಶ್ರೀ ಗವಿಸಿದ್ದೇಶ್ವರ ಪ.ಪೂ.ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ೨೦೧೧-೧೨ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ೨ನೇ ದಿನದ ಆಧುನಿಕ ಸಮಾಜದಲ್ಲಿ ಭಾರತೀಯ ಸಂಸ್ಕೃತಿ ಅವನತಿ ಮತ್ತು ಯುವಜನತೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತ ನುಡಿದರು. ಮುದುವರೆದು ಸಂಸ್ಕೃತಿ ವಿಭಿನ್ನ ನೆಲೆಗಳಿಂದ ಕೂಡಿದ್ದರೂ ಮಾನವ ಸಂಸ್ಕೃತಿ ಒಂದೇ ಆಗಿದೆ. ಪರೋಪಕಾರವೇ ಮಿಗಿಲಾದ ಸಂಸ್ಕೃತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿರೇಸಿಂದೋಗಿಯ ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾದ    ರಾಚಪ್ಪ ಕೇಸರಬಾವಿಯವರು ವ್ಯಕ್ತಿಗಳ ವಿಚಾರಗಳು, ವಸ್ತುಗಳು, ವರ್ತೆನೆಗಳು ಸಂಸ್ಕೃತಿಯಾಗುತ್ತದೆ. ನಮ್ಮ ಭಾರತೀಯ ಸಂಸ್ಕೃತಿ ಇತರ ದೇಶಕ್ಕೆ ಅನುಕರಣೀಯವಾಗಿದ್ದು ಇದನ್ನು ಇಂದಿನ ಯುವಶಕ್ತಿ ಅರ್ಥಮಾಡಿಕೊಳ್ಳಬೇಕಿದೆ ಎಂದರು. ವೇದಿಕೆಯ ಮೇಲೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಉಪಸ್ದಿತರಿದ್ದರು. 

ರವಿಕುಮಾರ ಬಾಲನಾಯಕರ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಶರಣಪ್ಪ ಬೆದವಟ್ಟಿ ಸ್ವಾಗತಿಸಿದರೆ ಕೊನೆಗೆ ಶರಣಪ್ಪ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಹನುಮೇಶ ಆಗೊಲಿ ನೆರೆವೆರಿಸಿದರು. 
Please follow and like us:
error