ಮಂಟೊ ಮಾನವೀಯ ಸಂವೇದನೆಗಳ ಮೇರು ಕತೆಗಾರ

ಕೊಪ್ಪಳ : ಸಾದತ್ ಹಸನ್ ಮಂಟೊ ದೇಶ ಕಂಡ ಮಹಾನ್ ಉರ್ದು ಕತೆಗಾರ. ತಮ್ಮ ಬರಹಗಳ ಮೂಲಕ ಮನುಷ್ಯನ ಅಮಾನವೀಯ ಕ್ರೌರ್ಯವನ್ನು ಮುಲಾಜಿಲ್ಲದೇ ಟೀಕಿಸಿ ಬರೆದಂತವನು. ದೇಶ ವಿಭಜನೆಯ ಸಮಯದ ಗಲಭೆಗಳನ್ನು ಕಣ್ಣಾರೆ ಕಂಡು ಹುಚ್ಚನಾಗಿದ್ದ. ಎಲ್ಲ ಜಾತಿ,ಧರ್ಮಗಳನ್ನು ಮೀರಿದ ಕೇವಲ ಮನುಷ್ಯತ್ವವನ್ನಷ್ಟೇ ಸಾರಿದ ಕಥೆಗಾರ. ಎಷ್ಟು ಖ್ಯಾತಿವಂತನೋ ಅಷ್ಟೇ ವಿವಾದಾಸ್ಪದ ಕತೆಗಾರ. ಆತನ ಬರಹಗಳ ವಿರುದ್ಧ ಕೆಂಗಣ್ಣು ಬೀರಿದ್ದ ಸರಕಾರ ಆತನ ಮೇಲೆ ಕೇಸುಗಳನ್ನು ಹಾಕಿತ್ತು.  ಕೊನೆಯವರೆಗೂ ಮಾನವೀಯತೆಯನ್ನು ಸಾರಿದ ಮಂಟೊನಂತಹ ಬರಹಗಾರರು ಇಂದಿನ ನಮ್ಮ ಸಮಾಜಕ್ಕೆ ಅತ್ಯಗತ್ಯ ಎಂದು ಕವಿಸಮೂಹದ ಸಿರಾಜ್ ಬಿಸರಳ್ಳಿ ಹೇಳಿದರು. ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಈಶ್ವರ ಗುಡಿ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೧೦೫ನೇ ಕವಿಸಮಯದಲ್ಲಿ ಸಾದತ್ ಹಸನ್ ಮಂಟೋರ ಜನ್ಮಶತನಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾದತ್ ಹಸನ್ ಮಂಟೊ ಬದುಕು,ಬರಹ ಕುರಿತು ಮಾತನಾಡಿದರು.
ಇಂದಿನ ಕವಿಸಮಯದಲ್ಲಿ ಸಾದತ್ ಹಸನ್ ಮಂಟೊರ ಕತೆಗಳನ್ನು ವಾಚನ ಮಾಡಲಾಯಿತು. ಕತೆಗಳ ಕುರಿತು ಚರ್ಚೆ ನಡೆಯಿತು. ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶ್ರೀನಿವಾಸ ಚಿತ್ರಗಾರರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಎ.ಪಿ.ಅಂಗಡಿ-ಹಜಾರಣ್ಣ, ಎನ್,ಜಡೆಯಪ್ಪ- ರೈತನ ಸ್ವಗತ,ಶಿವು ಹಲಗೇರಿ- ಒಡತಿ, ಶಾಂತಾದೇವಿ ಹಿರೇಮಠ- ಹೆಂಡತಿ ರೊಟ್ಟಿ, ಬಸವರಾಜ್ ಸಂಕನಗೌಡ್ರ- ಕನ್ನಡ ಶಾಹಿರಿಗಳು, ಶ್ರೀನಿವಾಸ ಚಿತ್ರಗಾರ- ಕಥನ ಕವನ,ಅನಸೂಯಾ ಜಾಗೀರದಾರ- ಬದುಕು, ಎಂ.ಡಿ.ಹುಸೇನ- ಗಲಭೆ ಸುತ್ತ ಕವನಗಳನ್ನು ವಾಚನ ಮಾಡಿದರು. ವಿಜಯಲಕ್ಷ್ಮೀ ಮಠದ – ಹೂವು ಎನ್ನುವ ಕತೆ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಡಾ.ಮಹಾಂತೇಶ ಮಲ್ಲನಗೌಡರ, ಬಸವರಾಜ ಶೀಲವಂತರ, ಶರಣಬಸಪ್ಪ ಬಿಳಿಎಲೆ, ಮಂಜುನಾಥ ಗೊಂಡಬಾಳ, ಶರಣಪ್ಪ ದಾನಕೈ, ಶಿವಾನಂದ ಹೊದ್ಲೂರ, ಶಿವಪ್ರಸಾದ ಹಾದಿಮನಿ, ಹನುಮಂತಪ್ಪ ಅಂಡಗಿ, ಮೂರ್ತಿ ಇಟಗಿ,ಶಿವಪ್ಪ ಹಾಗೂ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಶಿವಪ್ರಸಾದ ಹಾದಿಮನಿ, ವಂದನಾರ್ಪಣೆಯನ್ನು ಎನ್.ಜಡೆಯಪ್ಪ ಮಾಡಿದರೆ ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು. 
Please follow and like us:
error