ಗಣಕೀಕೃತ ಬೆಳೆ ದೃಢೀಕರಣ ಪಡೆಯಲು ಸೂಚನೆ.

ಕೊಪ್ಪಳ, ಸೆ.೧೪ (ಕ ವಾ) ತೋಟಗಾರಿಕೆ ಇಲಾಖೆ, ಕೊಪ್ಪಳ ಇವರ ವತಿಯಿಂದ ಜಿಲ್ಲೆಯ ರೈತರು ಗಣಕೀಕೃತ ಬೆಳೆ ದೃಢೀಕರಣ ಪಡೆಯುವಂತೆ ಸೂಚನೆ ನೀಡಲಾಗಿದೆ.
     ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಯಾವುದೇ ಯೋಜನೆಯಡಿ ಸಹಾಯಧನ ಪಡೆಯಲು ರೈತರು ಗಣಕೀಕೃತ ಬೆಳೆ ದೃಢೀಕರಣ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ಸಂಬಂಧಿಸಿದ ನಾಡಕಛೇರಿಗಳಲ್ಲಿ ಅಥವಾ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಯಾವುದಾದರೊಂದು ಗುರುತಿನ ಚೀಟಿಯೊಂದಿಗೆ ರೂ.೧೫ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಿ, ಗಣಕೀಕೃತ ದೃಢೀಕರಣ ಪತ್ರ ಪಡೆಯುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಾ ಹಿರಿಯ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
Please follow and like us:
error