ನ. ೨೮ ರಂದು ಲೇಬಗೇರಿ ಪೂಜ್ಯ ಅಯ್ಯಂದ್ರ ಶ್ರೀಗಳ ಸಮಾರಾಧನೆ

 ಇತ್ತೀಚೆಗೆ ಬ್ರಹ್ಮಲೀನರಾದ ಶ್ರೀ ಮತ್ಕಾಶ್ಯಾದಿ ಪಂಚಸಿಂಹಾಸನ ಪೂಜಿತರಾದ ಶ್ರೀ ಮದಾನೆಗುಂದಿ ಸಂಸ್ಥಾನ ಶ್ರೀ ಲಕ್ಷ್ಮೇಂದ್ರ ಮಹಾಸ್ವಾಮಿಗಳವರ ಮಠದ ಪೀಠಾಧೀಶರಾದ ಪೂಜ್ಯ ಶ್ರೀ ಅಯ್ಯಂದ್ರ ಮಹಾಸ್ವಾಮಿಗಳವರ ಸಮಾರಾಧನೆ ನವಂಬರ್ ೨೮ ರಂದು ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ವಿಶ್ವಕರ್ಮ ಸಮಾಜದ ಪವಿತ್ರ ಸ್ಥಳವಾದ ತಾಲೂಕಿನ ಲೇಬಗೇರಿ ಮಠದಲ್ಲಿ ಹಲವು ದಶಕಗಳ ಕಾಲ ಭಕ್ತರನ್ನು ಸಂತೈಸುತ್ತ ಸಮಾಜದ ಅಭವೃದ್ಧಿಗೆ ಸ್ಪಂದಿಸಿದ ಶ್ರೀ ಪ್ರಕಾರ ಪಂಡಿತರು, ಪೂಜಾನಿಷ್ಠರೂ, ಆಯುರ್ವೇದ ಜ್ಞಾನಿಗಳು, ಶ್ರೀದೇವಿ ಉಪಾಸಕರು, ರ್ಶರೋತ್ರೀಯ ಬ್ರಹ್ಮ ನಿಷ್ಠರಾಗಿದ್ದವರು. ಶ್ರೀಗಳು ತಮ್ಮ ೫೯ ನೇ ವರ್ಷದಲ್ಲಿ ಬ್ರಹ್ಮಲೀನರಾಗಿದ್ದು, ಅವರ ಮಠದಲ್ಲಿ ೨೮ ರಂದು ಸಮಾರಾಧನೆ, ನೈವೇದ್ಯ ಮಹಾಮಂಗಳಾರತಿ, ಪುಷ್ಪಾಂಜಲಿ ಮತ್ತು ನೆರೆದ ಭಕ್ತಾದಿಗಳು ಹಾಗೂ ಸಮಾರಾಧನೆಯಲ್ಲಿ ಪಾಲ್ಗೊಳ್ಳುವ ವಿವಿಧ ಮಠಾದೀಶರಿಂದ ನುಡಿನಮನ ನಡೆಯಲಿದೆ, ಅಂದು ಮಧ್ಯಾಹ್ನ ೧೨ ರಿಂದ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ ಕಾರಣ ಭಕ್ತಾದಿಗಳು ಸಮಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರೀಮಠದಿಂದ ಕೋರಲಾಗಿದೆ.
Please follow and like us:
error