ಕರ್ನಾಟಕ ರಾಜ್ಯ ಆದಿಜಾಂಬವ ವಕೀಲರ ಪರಿಷತ್ತಿನ ರಾಜ್ಯ ಮಟ್ಟದ ಪೂರ್ವಭಾವಿ ಸಭೆ ಯಶಸ್ವಿ

ಕೊಪ್ಪಳ : ಇತ್ತಿಚೆಗೆ ಕೊಪ್ಪಳ ನಗರದ ಹೊಟೇಲ್ ಪಾರ್ಥ ಇಂಟರನ್ಯಾಷನಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಆದಿಜಾಂಬವ ವಕೀಲರ ಪರಿಷತ್ತಿನ ಹಾಗೂ ಆದಿಜಾಂಬವ ಜಾಗೃತಿ ಪತ್ರಿಕೆ ಬಳಗದ ರಾಜ್ಯ ಮಟ್ಟದ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು. 
ಸಭೆಯ ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷರಾದ ಗವಿಸಿದ್ದಪ್ಪ ಕಂದಾರಿ ವಹಿಸಿದ್ದರು. ಸಭೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಗೋನಾಳು ಭೀಮಪ್ಪನವರ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಪರಿಷತ್ತಿನ ರಾಜ್ಯಾದ್ಯಕ್ಷರು ಹಾಗೂ ಆದಿ ಜಾಂಬವ ಜಾಗೃತಿ ಪತ್ರಿಕೆಯ ಸಂಪಾದಕರಾದ ಎಮ್ ಗಂಗಾಧರಯ್ಯ ನವರು ಮಾತನಾಡುತ್ತಾ ಕರ್ನಾಟಕ ರಾಜ್ಯ ಆದಿಜಾಂಬವ ವಕೀಲರ ಪರಿಷತ್ತು ಮತ್ತು ಆದಿ ಜಾಂಬವ ಜಾಗೃತಿ ಪತ್ರಿಕೆಯನ್ನು ರಾಜ್ಯಮಟ್ಟದಲ್ಲಿ ಬಲಗೊಳಿಸಬೇಕು. ಮತ್ತು ಪತ್ರಿಕೆಯನ್ನು ಪ್ರತಿಯೊಬ್ಬ ಜಾಂಬವನ ಮನೆ ಬಾಗಿಲಿಗೆ ಮುಟ್ಟಿಸುವಲ್ಲಿ ಪ್ರಯತ್ನಿಸಲಾಗುವುದು. ಅಲ್ಲದೆ ಪರಿಷತ್ತು ರಾಜ್ಯಮಟ್ಟದಲ್ಲಿ ಗಟ್ಟಿಯಾದಾಗ ಆದಿಜಾಂಬವ ಸಮಾಜಕ್ಕೆ ಶಕ್ತಿ ತುಂಬಿದಂಥಾಗುತ್ತದೆ. ವಕೀಲರ ಪರಿಷತ್ತನ್ನು ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿ ಪದಾಧಿಕಾರಿಗಳನ್ನು ಆಯ್ಕೆಮಾಡುವ ಕಾರ್ಯ ಇಂದಿನಿಂದ ಪ್ರಾರಂಭಗೊಳ್ಳಲಿ ಎಂದರು. 
ಇನ್ನೂರ್ವ ಅತಿಥಿಯಾದ ಡಾ. ಬಿ. ಜ್ಞಾನಸುಂದರ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಕಾರ್ಯಾಂಗ ಶಾಸಕಾಂಗ ಮತ್ತು ಪತ್ರಿಕಾರಂಗವೂ ಕೂಡಾ ಮಹತ್ವ ಪಡೆದಿದೆ. ಅದರಂತೆ ಪತ್ರಿಕೆಯಿಂದ ಸಮಾಜದ ಅಂಕುಡೊಂಕು ತಿದ್ದಬಹುದು. ಸಮಾಜದ ಆಂತರಿಕ ಅಂಧಕಾರವನ್ನು ತೊಳೆದು ಮುಖ್ಯ ವಾಹಿನಿಗೆ ತರುವ ಕಾರ್ಯವನ್ನು ಪತ್ರಿಕೆ ಮಾಡಲಿ ಎಂದು ಆಶಿಸಿದರು ಹಾಗೂ ವಕೀಲರ ಪರಿಷತ್ತು ಮತ್ತು ಆದಿ ಜಾಂಬವ ಜಾಗೃತಿ ಪತ್ರಿಕೆ ಬಳಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮುದಾಯಕ್ಕೆ ಅನ್ಯಾಯವಾದಾಗ ನ್ಯಾಯ ದೊರಕಿಸಿ ಕೊಡುವಲ್ಲಿ ಬಹುಮುಖ್ಯ ಪಾತ್ರವನ್ನು ವಕೀಲರ ಪರಿಷತ್ತು ನಿರ್ವಹಿಸಲಿದೆ. ಪರಿಷತ್ತು ಮತ್ತು  ಆದಿ ಜಾಂಬವ ಜಾಗೃತಿ ಪತ್ರಿಕೆ ಬಳಗ ಜಂಟಿಯಾಗಿ ಗ್ರಾಮೀಣ ಭಾಗದಲ್ಲಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು. ಮತ್ತು ಸರಕಾರದ ಯೋಜನೆಗಳ ಬಗ್ಗೆ ತಿಳಿಹೇಳಿ ಅರ್ಹರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆನೀಡಿದರು. 
ಇನ್ನೋರ್ವ ದಲಿತಪರ ಹೋರಾಟಗಾರ ಲಾಲಪ್ಪ ರಾಯಚೂರು ಮಾತನಾಡಿದರು. ಉದ್ಘಾಟಕರಾಗಿ ಆಗಮಿಸಿದ ಸಮಾಜದ ಹಿರಿಯ ಐಎಎಸ್ ನಿವೃತ್ತ ದಕ್ಷ ಅಧಿಕಾರಿಯಾದ ಗೋನಾಳು ಭೀಮಪ್ಪನವರಿಗೆ ಪರಿಷತ್ತು ಮತ್ತು ಪತ್ರಿಕಾ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಭೆಗೆ ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಶರಣ್ಪಪ ಚಂದನಕಟ್ಟಿ, ನಿವೃತ್ತ ತಹಶಿಲ್ದಾರ ಬಸವರಾಜ ಪಿರಂಗಿ, ನಿವೃತ್ತ ಅರಣ್ಯ ಅಧಿಕಾರಿ ಯಮನಪ್ಪ ಗಿರಿಜಾಲಿ ರಾಯಚೂರ, ವಕೀಲರಾದ ವೈ ಜಯರಾಜ, ದಲಿತ ಮುಖಂಡ ಹರೀಶ ಕುಷ್ಟಗಿ ಆಗಮಿಸಿದ್ದರು, ಹಾಲೇಶ ಕಂದಾರಿ, ಪ್ರಭುರಾಜ ಕಿಡದಾಳ, ನಾಗಲಿಂಗ ಹಿರೇಮನಿ, ಪುಟ್ಟರಾಜ ಆರ್, ಶರಣಪ್ಪ ಲೇಬಗೇರಿ, ನಿಂಗಪ್ಪ ಪಿ, ಮುರಗಾನೂರ ಜೇವರ್ಗಿ, ರಾಮಚಂದ್ರ ಸಿಂದನೂರ, ಯಲ್ಲಪ್ಪ ಗೋನಪಾರೆ, ಹೆಚ್.ಪಿ. ಆಂಜನಪ್ಪ,  ಹೆಚ್. ರಾಮಣ್ಣ ಹೊಸಪೇಟೆ, ಕೃಷ್ಣಾ ಆರ್. ಲಿಂಗಸಗೂರ, ವಕೀಲರಾದ ಕೆ. ಕುಮಾರಸ್ವಾಮಿ ಬಳ್ಳಾರಿ, ಹೆಚ್. ಈರಪ್ಪ ಕುದರಿಮೋತಿ, ಕೆ.ಎಸ್. ಮೈಲಾರಪ್ಪ, ಮರಿಯಪ್ಪ ಆರ್. ಲಿಂಗದಳ್ಳಿ, ಡಾ. ದುರಗಪ್ಪ ಬಳ್ಳಾರಿ, ನಂದಕುಮಾರ ಪಿ. ಸುರಪುರ, ಶಾಂತಪ್ಪ ಕಾನಳ್ಳಿ ಯಾದಗಿರಿ, ಪಂಡಿತ ಏ. ನುರಬನೂರ ಸುರಪುರ, ಸಾಹಿತಿಗಳಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಗಾಳೆಪ್ಪ ಎಸ್. ದೊಡ್ಡಮನಿ ಇನ್ನು ಮುಂತಾದವರು ಉಪಸ್ಥಿತರಿದ್ದರು. 
Please follow and like us:
error