ಚುನಾವಣೆ ವೆಚ್ಚಗಳ ಮೇಲೆ ನಿಗಾವಹಿಸಲು ತಂಡ ರಚನೆ

 ಲೋಕಸಭಾ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ಹೊರಡಿಸಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಭರಿಸುವ ಚುನಾವಣಾ ವೆಚ್ಚಗಳ ಮೇಲೆ ನಿಗಾವಹಿಸಲು ಜಿಲ್ಲಾ ಮಟ್ಟದಲ್ಲಿ (ಇxಠಿeಟಿಜiಣuಡಿe ಒoಟಿiಣoಡಿಥಿ ಅeಟಟ) ಅನ್ನು ಸ್ಥಾಪಿಸಲಾಗಿದ್ದು,   ಈ ತಂಡಕ್ಕೆ ವಿವಿಧ ಅಧಿಕಾರಿಗಳನ್ನು ಕಾರ್ಯನಿರ್ವಹಿಸಲು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ.ಪಿ.ಮೋಹನ್‌ರಾಜ್ ಅವರು ಆದೇಶ ಹೊರಡಿಸಿದ್ದಾರೆ.
(ಇxಠಿeಟಿಜiಣuಡಿe ಒoಟಿiಣoಡಿಥಿ ಅeಟಟ) ಅಧಿಕಾರಿಗಳು : ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಟಿ.ಆರ್. ಶಿವಪ್ರಸಾದ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಜಿ.ಪಂ. ಅಕೌಂಟ್ಸ್ ಆಫೀಸರ್ ಅಮೀನಸಾಬ ಅತ್ತಾರ ಅವರನ್ನು ಸಹಾಯಕ ನೋಡಲ್ ಅಧಿಕಾರಿಯನ್ನಾಗಿ. ಸಹಾಯಕ ಸಾಂಖ್ಯಿಕ ಅಧಿಕಾರಿ ಬಸನಗೌಡ ಗೌಡರ್- ಮೇಲ್ವಿಚಾರಕರು. ಅಧೀಕ್ಷಕ ವೆಂಕಟೇಶ ಪ್ರಸಾದ್ ಮತ್ತು ಪ್ರದಸ ಭೋಗೇಶ್ಸಗರ ಇವರನ್ನು ಸಹಾಯಕರನ್ನಾಗಿ ನೇಮಿಸಲಾಗಿದೆ. (ಇxಠಿeಟಿಜiಣuಡಿe ಒoಟಿiಣoಡಿಥಿ ಅeಟಟ) ತಂಡವು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು, ಸ್ಪರ್ಧಿಸುವ ಅಭ್ಯರ್ಥಿಗಳು ಮಾಡುವ ಚುನಾವಣೆ ವೆಚ್ಚಗಳನ್ನು ವೀಕ್ಷಿಸಲು, ತಪಾಸಣೆ ಮಾಡಲು ಮತ್ತು ಅವರು ನಿರ್ವಹಿಸಿರುವ ವೆಚ್ಚಗಳ ರಜಿಸ್ಟರ್‌ಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply