ಪ್ರಾದೇಶಿಕ ತಾರತಮ್ಯ ಸಲ್ಲದು – ಸಂಗಣ್ಣ ಕರಡಿ

ಕೊಪ್ಪಳ : ಸಮಸ್ತ ಭಾರತ ದೇಶಕ್ಕೆ ಸ್ವಾತಂತ್ರ್ಯದ ಭಾಗ್ಯ ದೊರೆತರು ಹೈದ್ರಾಬಾದ ಸಂಸ್ಥಾನ ಜಮ್ಮು ಕಾಶ್ಮೀರ ಸಂಸ್ಥಾನ, ಜೂನಾಗರ ಮುಂತಾದ ಪ್ರದೇಶಗಳು ಜನತೆಗೆ ಸ್ವಾತಂತ್ರ್ಯದ ಸವಿ ಸಿಕ್ಕಿರಲಿಲ್ಲ. ಭಾರತದ ಏಕತೆಯನ್ನು ಒಪ್ಪದ ನಿಜಾಮರ ದೌರ್ಜನ್ಯದ ಆಡಳಿತದಲ್ಲಿ ನಲುಕುತ್ತಿತ್ತು. ಇಂತಹ ವಿತರಿಕ್ತ ಸಂದರ್ಭದಲ್ಲಿ ಉಕ್ಕಿನ ಮನುಷ್ಯನ ಸರರ್ಧಾರ ವಲ್ಲಾಭ ಬಾಯಿ ಪಟೇಲರಿಂದ ಸೆ.೧೭ ೧೯೪೮ ರಂದು ಮುಕ್ತಿ ಪಡೆಯಿತು. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣಕ್ಕೆ ಆಗಮಿಸಿದೆ ಸಮಸ್ತ ಹೈದ್ರಾಬಾದ ಕರ್ನಾಟಕದ ಜನತೆಗೆ ಭಾವನೆಗಳಿಗೆ ದಕ್ಕಿ ಉಂಟು ಮಾಡಿರುವುದು ನೋವಿನ ಸಂಗತಿ ಎಂದು ಮಾತನಾಡಿದರು.

ಅಭಿವೃದ್ದಿ ಕಾರ್ಯಗಳ ವಿಷಯದಲ್ಲಿ ಮೊದನಿಂದಲು ಕಡೆಗಣಿಸಲ್ಪಡುತ್ತಿರುವ ಈ ಭಾಗವು ತನ್ನ ಸ್ವತಂತ್ರ್ಯತೆಯನ್ನು ಆಚರಿಸುವಕೊಳ್ಳುವ ವಿಷಯದಲ್ಲಿ ಕಡಗಣನೆಗೆ ಒಳಗಾಗುತ್ತಿರುವುದು. ರಾಜ್ಯದ ಮುಖ್ಯಮಂತ್ರಿಗಳ ದ್ವಂದ ನಿಲುವಿನ ಉತ್ತಮ ನಿದರ್ಶನವಾಗಿದೆ. ಈ ಭಾಗವನ್ನು ಅಭಿವೃದ್ದಿಯ ಪಥದತ್ತ ಕೊಂಡಯ್ದು ರಾಜ್ಯದಲ್ಲಿ ಸಮಾನತೆಯ ಸ್ಥಾಪಿಸುವ ಕಾರ್ಯವನ್ನು ಮಾಡಬೇಕಾದ ಮಾನ್ಯ ಮುಖ್ಯ ಮಂತ್ರಿಗಳೆ ಈ ಭಾಗದ ಬಗ್ಗೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವುದು ಶೋಚನಿಯನಿಸುತ್ತದೆ. ಎಂದು ಜಿಲ್ಲಾ ಆಡಳಿತ ಭವನದ ಮುಂದೆ ಧರಣಿ ನಿರತ ಬಿ.ಜೆ.ಪಿ ಕಾರ್ಯಕರ್ತರನ್ನು ಉದ್ದೇಶಿಸಿ ಸಂಗಣ್ಣ ಕರಡಿ ಮಾತನಾಡಿದರು ಈ ಸಂದರ್ಭದಲ್ಲಿ ಸಂಸದರಾದ ಶಿವರಾಮಗೌಡ ರವರು ಮಾತನಾಡಿ ಅನೆಕ ವರ್ಷಗಳ ನಂತರದಿಂದ ಹೋರಾಟದ ನಂತರ ಹೈದ್ರಾಬಾದ ಕರ್ನಾಟಕಕ್ಕೆ ವಿಶೇಷ ಸೌಲಭ್ಯಗಳನ್ನು ನೀಡುವ ಕಲಂ ೩೭೧ (ಜೆ)ಗೆ ಅನುಮೋಧನೆ ದೊರೆತರು ರಾಜ್ಯ ಸರಕಾರದ ನಿರ್ಲಕ್ಷತೆಯಿಂದ ಇನ್ನೂ ಅನುಷ್ಠಾನದ ಭಾಗ್ಯ ದೊರೆತಿಲ್ಲ ೩೭೧ (ಜೆ) ಹೈದ್ರಾಬಾದ ಕರ್ನಾಟಕ ದಿನಾಚರಣೆಯ ಕೊಡುಗೆಯಾಗಲಿದೆ ಎಂದು ಆಶಾಭಾವ ಹೊಂದಿದ್ದು ಈ ಭಾಗದ ಜನರ ಕನಸು ನನಸಾಗಿಯೆ ಉಳದಿದೆ. ಹೈದ್ರಬಾದ ಕರ್ನಾಟಕ ಧ್ವಜಾರೋಹಣೆಗೆ ಬಾರದ ಮುಖ್ಯಮಂತ್ರಿಗಳ ಧೊರಣೆಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ಗಿರಿಗೌಡ್ರ, ನರಸಿಂಗರಾವ್ ಕುಕರ್ಣಿ, ಸಂಗಮೇಶ ಡಂಬಳ, ರಾಜು ಬಾಕಳೆ, ಸಂಗಪ್ಪ ವಕ್ಕಳದ, ತೋಟಪ್ಪ ಮೇಟಿ, ಕೆ.ನಾರಾಯಣಪ್ಪ ಶಿವಪ್ಪ ಮುತ್ತಾಳ, ನಗರಸಭಾ ಸದಸ್ಯರುಗಳಾದ ಅಪ್ಪಣ್ಣ ಪದಕಿ, ಪಂಪಣ್ಣ ಪಲ್ಲೇದ ಪ್ರಾಣೇಶ ಮಾದಿನೂರು, ವಿಜಯಾ ಹಿರೇಮಠ, ಗವಿಸಿದ್ದಪ್ಪ ಚಿನ್ನೂರು, ಮಹಿಳಾ ಮುಖಂಡರುಗಳಾದ ಹೇಮಲತಾ ನಾಯಕ, ಶ್ಯಾಮಲಾ ಕೊಮಲಾಪುರ, ವೇದಾ ಜೋಷಿ, ಹೇಮಕ್ಕ ಮಂಗಳೂರು, ಸದಾಶಿವಯ್ಯ ಹಿರೇಮಠ, ಬಸವರಾಜ ನೀರಲಗಿ, ಹಾಲೇಶ ಕಂದಾರಿ, ತೋಟಪ್ಪ ಕಾಮನೂರು, ಮಂಜುನಾಥ ಪಾಟೀಲ ಹಂದ್ರಾಳ, ಮಾರುತೇಪ್ಪ ಹಲಗೇರಿ, ಮಂಜುನಾಥ ಗಾಳಿ,  ಜಿಲ್ಲಾ ವಕ್ತಾರರಾದ ಚಂದ್ರುಶೇಖರಗೌಡ ಪಾಟೀಲ ಹಲಗೇರಿ ಉಪಸ್ಥಿತರಿದ್ದರು.  
Please follow and like us:
error