ಗೋವಾ ಸರ್ಕಾರದ ಪ್ರತಿಕೃತಿ ದಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

ಕರವೇ : ಗೋವಾದ ಬೈನಾ ತೀರದ ಕನ್ನಡಿಗರ ಕುಟುಂಬಗಳಿಗೆ ರಕ್ಷಣೆ ನೀಡಬೇಕೆಂದು ಗೋವಾ ಸರ್ಕಾರದ ಪ್ರತಿಕೃತಿ ದಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು

ಕೊಪ್ಪಳ : ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕೊಪ್ಪಳ ತಾಲೂಕ ಘಟಕವು ಕನಕದಾಸ ವೃತ್ತದಲ್ಲಿ ಗೋವಾ ರಾಜ್ಯದಲ್ಲಿ ಇರುವ ಬೈನಾ ತೀರದ ೨೦೫ ಕನ್ನಡಿಗರ ಕುಟುಂಬಗಳನ್ನು ಒಕ್ಕಲೆಬ್ಬಿಸುತ್ತಿರುವುದನ್ನು ವಿರೋಧಿಸಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ರಸ್ತೆ ತಡೆ ನಡೆಸಿ ಗೋವಾ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು.  ಪ್ರತಿಭಟನೆಯಲ್ಲಿ ಕೊಪ್ಪಳ ಜಿಲ್ಲಾ ಸಂಚಾಲಕರಾದ ಬಿ.ಗಿರೀಶಾನಂದ ಜ್ಞಾನಸುಂದರ ಮಾತನಾಡಿ ಗೋವಾದ ಬೈನಾ ತೀರದಲ್ಲಿ ನೆಲೆಸಿರುವ ಸುಮಾರು ೨೦೫ ಕನ್ನಡಿಗರ ಕುಟುಂಬಗಲಿಗೆ ಕೇವಲ ೪೮ ಗಂಟೆ ಒಳಗೆ ತಮ್ಮ ವಸತಿಯನ್ನು ತೆರವುಗೊಳಿಸಲು ಆದೇಶಿಸಿ ಗೋವಾ ಸರ್ಕಾರ ನೋಟಿಸು ನೀಡಿರುವುದನ್ನು ಕರವೇ ಬಲವಾಗಿ ಖಂಡಿಸುತ್ತದೆ. ಈ ಘಟನೆಯಲ್ಲಿ ಅಲ್ಲಿ ನೆಲಸಿರುವ ಕನ್ನಡಿಗರಿಗೆ ಈ ವಿಷಯವು ಬರಸಿಡಿಲಿನಂತೆ ಬಂದೆರಗಿದೆ. ಯಾವುದೇ ಪುನರ ವಸತಿ ಕ್ರಮಗಳನ್ನು ಕೈಗೊಳ್ಳದೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿದೆ ಹೀಗೆ ಏಕಾಏಕಿ ದೌರ್ಜನ್ಯದ ಕ್ರಮ ಕೈಗೊಂಡಿರುವ ಗೋವಾ ಸರ್ಕಾರದ ಕ್ರಮವನ್ನು ಕರ್ನಾಟಕ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಗಂಭಿರವಾಗಿ ಪರಿಗಣಿಸಿಲ್ಲ ಮತ್ತು ಗೋವಾದಲ್ಲಿನ ಕನ್ನಡಿಗರ ರಕ್ಷಣೆಗೆ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಈ ಹಿಂದೆಯೂ ನೂರಾರು ಕನ್ನಡಿಗರನ್ನು ದಿಢೀರ ತೇರವುಗೊಳಿಸಿ ನಿರಾಶ್ರಿತರನ್ನಾಗಿಸಿತ್ತು. ಆ ಸಂದರ್ಭದಲ್ಲಿ ಕರವೇ ಪ್ರತಿಭಟಿಸಿತ್ತು. ಗೋವಾ ಸರ್ಕಾರದ ನಿಲುವಿಗೆ ತದ್ವಿರುದ್ಧವಾಗಿ, ಕರ್ನಾಟಕ್ಕೆ ಪರ ರಾಜ್ಯಗಳಿಂದ ವಲಸೆ ಬಂದು ನೆಲಸಿರುವ ಜನರಿಗೆ ಅನೇಕ ವರ್ಷಗಳಿಂದ ವಸತಿ, ಕುಡಿಯುವ ನೀರು, ಪಡಿತರ ಚೀಟಿ, ಉದ್ಯೋಗ ಹೀಗೆ ದೈನಂದಿನ ಬದುಕಿಗೆ ಅಗತ್ಯವಾದ ಎಲ್ಲಾ ಸವಲತ್ತುಗಳನ್ನು ಕರ್ನಾಟಕ ಸರ್ಕಾರ ಒದಗಿಸಿರುತ್ತದೆ. ಅಷ್ಟೆ ಅಲ್ಲದೆ ಸಹೃದಯಿ ಮನಸಿರುವವರೆಂದೆ ಹೆಸರು ವಾಸಿಯಾಗಿರುವ ಕನ್ನಡಿಗರು, ವಲಸಿಗರು, ಕರ್ನಾಟಕ ಮುಖ್ಯವಾಹಿನಿಯೊಂದಿಗೆ ಬರೆಯಲು ಎಲ್ಲಾ ಸಹಕಾರವನ್ನು ನೀಡುವವರೊಂದಿಗೆ, ವಲಸಿಗರೊಡನೆ ಸಾಮರಸ್ಯದ ಜೀವನ ನಡೆಸಲು ಸದಾ ಸಹಕಾರಿಯಾಗಿರುತ್ತಾರೆ. ಆದರೆ ಪರ ರಾಜ್ಯಗಳಲ್ಲಿ ನೆಲಸಿರುವ ಕನ್ನಡಿಗರಿಗೆ ಅಲ್ಲಿನ ಜನರಿಂದ ಈ ಮಟ್ಟದ ಸಹಕಾರವಾಗಲಿ, ಅಲ್ಲಿನ ಸರ್ಕಾರ ಬೆಂಬಲವಾಗಲಿ ದೊರತಿರುವ ಉದಾಹಣೆಗಳಿಲ್ಲ. ಕೊಪ್ಪಳ ತಾಲೂಕ ಅಧ್ಯಕ್ಷ ಹನುಮಂತ ಬೆಸ್ತರ ಮಾತನಾಡಿ ಇಂತಹ ಸಂದೀಘ್ಞ ಪರಿಸ್ಥಿತಿಯಲ್ಲಿ ಗೋವಾದಲ್ಲಿ ನೆಲಸಿರುವ ಮೀನುಗಾರಿಕೆ ಕ್ಷೇತ್ರದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮತ್ತು ದಿನಗೂಲಿಯನ್ನು ನಂಬಿ ಜೀವನ ನಡೆಸುತ್ತಿರುವ ಬಡ ಕನ್ನಡಿಗರ ಕುಟುಂಬದವರನ್ನು ನಿರಾಶ್ರಿತಗೊಳಿಸಿರುವ ಗೋವಾ ಸರ್ಕಾರ ಈ ಕ್ರಮವನ್ನು ಕರವೇ ವಿರೋಧಿಸುತ್ತದೆ. ಕರ್ನಾಟಕ ಸಕಾರವು ಗೋವಾದಲ್ಲಿನ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಗೋವಾ ಸರ್ಕಾರವನ್ನು ಆಗ್ರಹಿಸಬೇಕು. ಮತ್ತು ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಗೋವಾ ಸರ್ಕಾರಕ್ಕೆ ಸೂಕ್ತ ಸೂಚನೆಗಳನ್ನು ನೀಡಬೇಕೆಂದು ಈ ಪ್ರತಿಭಟನೆಯ ಮೂಲಕ ಕರವೇ ಕೊಪ್ಪಳ ತಾಲೂಕ ಘಟಕ ಆಗ್ರಹಿಸುತ್ತದೆ. 
ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರವೀಣ ಬ್ಯಾಹಟ್ಟಿ, ತಾಲೂಕ ಉಪಾದ್ಯಕ್ಷ ಲಿಂಗರಾಜ ಮೂಗಿನ, ನಗರಾಧ್ಯಕ್ಷ ಗವಿಸಿದ್ದಪ್ಪ ಹಂಡಿ, ಯಲಬುರ್ಗಾ ತಾಲೂಕ ಅಧ್ಯಕ್ಷ ಶರಣಯ್ಯ ಬಂಡಿ, ಆಟೋ ಘಟಕದ ಅಧ್ಯಕ್ಷ ಶಿವಕುಮಾರ ಕುಕನೂರ, ಮಾರುತಿ ಕ್ವಾಟಿ, ಶಶಿ ಬಿಡನಾಳ, ಆನಂದ ಎಲಿಗಾರ, ಮಾರತಿ ಕುರಿ, ಕಳಕಪ್ಪ ಗೆಜ್ಜಿ, ರೀಯಾಜ್ ಕುದರಿಮೋತಿ, ವಿನೋದ ರೇವಡಿ, ಮಂಜುನಾಥ ಹಿರೇಮಠ, ಮಹೇಶ ಬನ್ನಿಕೊಪ್ಪ, ಇನ್ನು ಮೂಂತಾದವರು ಭಾಗವಹಿಸಿದ್ದರು.

Related posts

Leave a Comment