ಕಸಾಪ ಚುನಾವಣೆ ರಾಜಶೇಖರ ಅಂಗಡಿಗೆ ಉತ್ತಮ ಬೆಂಬಲ -ಡಾ.ರಡ್ಡೇರ.

ಕೊಪ್ಪಳ ಫೆ.೨೬ ಇದೇ ರವಿವಾರ ಫೆ.೨೮ ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ  ಕ್ರಿಯಾಶೀಲ ಸಂಘಟಕ ರಾಜಶೇಖರ ಅಂಗಡಿಯವರಿಗೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ಎರಡು ದಶಕಗಳಿಂದ ಜಿಲ್ಲೆಯ ಸಾಹಿತ್ಯಿಕ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ  ಸಕ್ರಿಯರಾಗಿರುವ ರಾಜಶೇಖರ ಅಂಗಡಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಸರಳ ವ್ಯಕ್ತಿಯಾಗಿದ್ದಾರೆ. ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿರುವ ೬೦೪೦ ಮತದಾರರ ಪೈಕಿ ಈಗಾಗಲೇ ಅರ್ಧಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಮುಖತಃ ಭೇಟಿಯಾಗಿರುವ ಅಭ್ಯರ್ಥಿ ಹಾಗೂ ಅವರು ಬೆಂಬಲಿಗರಲ್ಲಿ  ನಿಚ್ಚಳ ಭರವಸೆ ಮೂಡಿದೆ.  ಕಸಾಪ ಸಾರಥ್ಯಕ್ಕೆ ಸೂಕ್ತವಾಗಿರುವ ರಾಜಶೇಖರ ಅಂಗಡಿಯವರಿಗೆ ಎಲ್ಲರೂ ಮತ ನೀಡಬೇಕು ಎಂದು ಹಿರಿಯ ಸಾಹಿತಿ ,ಪ್ರಾಚಾರ್ಯ  ಡಾ.ವಿ.ಬಿ.ರಡ್ಡೇರ ಮನವಿ ಮಾಡಿದ್ದಾರೆ. ನಗರದ ವಾಲ್ಮೀಕಿ ಭವನದ ಹತ್ತಿರದ ಮಳಿಗೆಯೊಂದರಲ್ಲಿ ಶುಕ್ರವಾರ ಏರ್ಪಡಿಸಿದ್ದ  ಕಸಾಪ ಚುನಾವಣೆ
ಸಿದ್ಧತೆ ಕುರಿತ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಡಾ.ರಡ್ಡೇರ
ಅವರು  ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ ಅವರ ಎರಡೂ ಅವಧಿಗಳಲ್ಲಿ
ಕಸಾಪ ಪದಾಧಿಕಾರಿಯಾಗಿ ಕನ್ನಡ ನುಡಿ ಸೇವೆಗೈದಿರುವ ರಾಜಶೇಖರ ಅಂಗಡಿ ತಮ್ಮ
ಸಹಜ,ಸ್ಪಂದನಶೀಲ ಗುಣದಿಂದಾಗಿ  ಜಿಲ್ಲೆಯ ಜನರ ಪ್ರೀತಿ,ವಿಶ್ವಾಸ
ಸಂಪಾದಿಸಿಕೊಂಡಿದ್ದಾರೆ. ಕಳೆದ ಬಾರಿ ಕೆಲವು ಕಾರಣಾಂತರಗಳಿಂದಾಗಿ ಗೆಲುವಿನಿಂದ
ವಂಚಿತರಾಗಿರುವ ಇವರಿಗೆ ಈ ಬಾರಿ ಬೆಂಬಲಿಸಲು ಕಸಾಪ ಆಜೀವ ಸದಸ್ಯರ ಮನವೊಲಿಸಲು
ಪ್ರತಿಯೊಬ್ಬ ಅವರ ಹಿತೈಷಿಗಳೂ  ಶ್ರಮಿಸಬೇಕು.  ಆರು ಸಾವಿರದಷ್ಟಿರುವ ಮತದಾರರೆಲ್ಲರನ್ನೂ
ಅಭ್ಯರ್ಥಿಯೊಬ್ಬರೇ ಖುದ್ದಾಗಿ ಭೇಟಿಯಾಗುವದು ಕಷ್ಟಸಾಧ್ಯದ ಮಾತಾಗಿದೆಯಾದರೂ ರಾಜಶೇಖರ
ಅಂಗಡಿ ಕಳೆದ ಕೆಲವು ತಿಂಗಳಿನಿಂದ ವಿರಮಿಸದೇ ಎಲ್ಲರನ್ನೂ ಮುಖತಃ ಇಲ್ಲವೇ ದೂರವಾಣಿ ಮೂಲಕ
ಸಂಪರ್ಕಿಸುತ್ತಿದ್ದಾರೆ. ಮಾಧ್ಯಮ ,ಸಾಮಾಜಿಕ ಜಾಲತಾಣಗಳ ಮೂಲಕವೂ
ಸಂಪರ್ಕಿಸಲಾಗುತ್ತಿದೆ. ಅದರೂ ಕೆಲವು ಆಜೀವ ಸದಸ್ಯರ ವಿಳಾಸಗಳು ಬದಲಾಗಿವೆ ಆದರೆ
ವರ್ಗಾವಣೆಗೊಳ್ಳದೇ ಹಾಗೆಯೇ ಪಟ್ಟಿಯಲ್ಲಿ ಉಳಿದಿವೆ ಅವರನ್ನು ಹುಡುಕುವದು
ಕಷ್ಟವಾಗುತ್ತಿದೆ. ಆಜೀವ ಸದಸ್ಯರು ಸುಳ್ಳು ವದಂತಿ,ಅಪಪ್ರಚಾರಗಳಿಗೆ ಕಿವಿಗೊಡದೇ ತಮ್ಮ
ಆತ್ಮಸಾಕ್ಷಿಯ ಮತವನ್ನು ಪ್ರಾಮಾಣಿಕ ಹಾಗೂ ಕ್ರಿಯಾಶೀಲ ಸಂಘಟಕ ರಾಜಶೇಖರ ಅಂಗಡಿಯವರಿಗೆ
ನೀಡಬೇಕು ಎಂದು ಡಾ.ವಿ.ಬಿ.ರಡ್ಡೇರ ಮನವಿ ಮಾಡಿದರು.
ಪತ್ರಕರ್ತ ಶರಣಪ್ಪ ಬಾಚಲಾಪೂರ, ಪ್ರಾಧ್ಯಾಪಕ ಡಾ.ಬಸವರಾಜ ಪೂಜಾರ ಮಾತನಾಡಿ ಕೊಪ್ಪಳ ಜಿಲ್ಲೆಯ ಕಸಾಪ ಆಜೀವ ಸದಸ್ಯರು ಈ ಬಾರಿ ರಾಜಶೇಖರ ಅಂಗಡಿಯವರನ್ನು ಗೆಲ್ಲಿಸಲು ಮನಸ್ಸು ಮಾಡಿದ್ದಾರೆ. ಅವರನ್ನೆಲ್ಲ ಸಂಪರ್ಕಿಸಿ ಅಂದು ತಪ್ಪದೇ ಮತ ಹಾಕುವಂತೆ ನೋಡಿಕೊಳ್ಳಬೇಕು.ಮತದಾನಕ್ಕೆ  ಬಾಕಿ ಇರುವ ಈ ಕೆಲವೇ ಗಂಟೆಗಳ ಅಮೂಲ್ಯ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕನ್ನಡದ ನುಡಿ ಸೇವೆಯ ಅವಕಾಶ ರಾಜಶೇಖರನಂತಹ ಕ್ರಿಯಾಶೀಲರಿಗೆ ಸಿಗುವಂತಾಗಬೇಕು ಎಂದರು
.
ಉಪನ್ಯಾಸಕರಾದ ಹನುಮಂತಪ್ಪ ಅಂಡಗಿ,ಡಾ.ಸಿದ್ಧಲಿಂಗಪ್ಪ ಕೋಟ್ನೇಕಲ್,ಪತ್ರಕರ್ತರಾದ ಸೋಮರೆಡ್ಡಿ ಅಳವಂಡಿ,ಬಸವರಾಜ ಕರುಗಲ್,ಶಿವರಾಜ ನುಗಡೋಣಿ, ಗವಿಸಿದ್ದೇಶ ಹುಡೇಜಾಲಿ,ಮಂಜುನಾಥ ಡೊಳ್ಳಿನ,ಸಂತೋಷ ದೇಶಪಾಂಡೆ,ಜಗದೀಶ ಚಟ್ಟಿ,ನೀಲಕಂಠಯ್ಯ ಹಿರೇಮಠ,ಸಿದ್ಧಣ್ಣ ವಾರದ,ದೇವರೆಡ್ಡಿ,ಗಿರೀಶ ಪಾನಘಂಟಿ,ರಮೇಶ ತುಪ್ಪದ,ಮಂಜುನಾಥ ಅಂಗಡಿ,ಜಗದೀಶಗೌಡ ತೆಗ್ಗಿನಮನಿ,ಜಗದೀಶ ಗುತ್ತಿ,ಶಂಕರ ಕೊಪ್ಪದ,ಮಾರುತಿ ಕಟ್ಟೀಮನಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Please follow and like us:
error