ಐತಿಹಾಸಿಕ ಗಂಡುಗಲಿ ಕುಮಾರರಾಮ ಕುಮ್ಮಟದುರ್ಗ ರಕ್ಷಣೆಗಾಗಿ ಮನವಿ

೧೦-೦೩-೨೦೧೪ ರಂದು  ಗಂಡುಗಲಿ ಕುಮಾರರಾಮ ಕಮ್ಮಟದುರ್ಗ ರಕ್ಷಣಾ ಸಮಿತಿಯವರು ಐತಿಹಾಸಿಕ ಗಂಡುಗಲಿ ಕುಮಾರರಾಮ ಕುಮ್ಮಟದುರ್ಗ ರಕ್ಷಣೆಗಾಗಿ ತಹಶಿಲ್ದಾರರರಿಗೆ  ಮನವಿ ಸಲ್ಲಿಸಿದರು.

 ಐತಿಹಾಸಿಕ ಕುಮ್ಮಟ ದುರ್ಗಕ್ಕೆ ಹೋಗುವ ರಸ್ತೆಯಲ್ಲಿ ಮುನಿರಾಬಾದ್ ಮೈಬೂಬನಗರ ರೈಲ್ವೇ  ಕಾಮಗಾರಿಯವರು ಗುಂಡಿಯನ್ನು ತೆಗೆದು ಸುಮಾರು ಅರ್ಧ ಕಿಲೋ ಮೀಟರ ರಸ್ತೆಯನ್ನು ಅಗೆದು ರಸ್ತೆಯ ಮಣ್ಣನ್ನು ತಮ್ಮ ಕಾಮಗಾರಿಗೆ ಉಪಯೋಗಿಸಿರುತ್ತಾರೆ. ಸದರಿ ಗುಂಡಿಯಲ್ಲಿ ಆಳವಾದ ನೀರು ನಿಂತು ರಸ್ತೆ ತುಂಬಾ ಹದಗೆಟ್ಟಿ ಹೋಗಿದೆ. ಐತಿಹಾಸಿಕ ದೇವಸ್ಥಾನಕ್ಕೆ ಹೋಗಲು ಪ್ರವಾಸಿಗರು ಮತ್ತು ಭಕ್ತಾಧಿಗಳು ಯಾವುದೇ ವಾಹನಗಳು ಚಲಿಸದಂತಾಗಿದೆ. ಸುಮಾರು ೩.೦೦ ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ. ಆದ ಕಾರಣ ಸದರಿಯವರು ಬೇಗನೆ ಈ ರಸ್ತೇಯನ್ನು ಮಾಡಬೇಕೆಂದು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಗಂಡುಗಲಿ ಕುಮಾರರಾಮ ಕಮ್ಮಟದುರ್ಗ ರಕ್ಷಣಾ ಸಮಿತಿ ಅಧ್ಯಕ್ಷ ವೆಂಕಟೇಶ ಈಳಿಗೇರ, ಗಂಡುಗಲಿ ಕುಮಾರರಾಮ ಯುವಕ ಸಂಘದ ಅಧ್ಯಕ್ಷ ಮಂಜುನಾಥ ಬೋವಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ನಾಗಪ್ಪ ಕಬ್ಬೇರ, ನಾಗಲಿಂಗಪ್ಪ ಹೊಸಪೇಟಿ, ಮಾರ್ಕಂಡೆಪ್ಪ ಪೂಜಾರ, ನಾಗರಾಜ ಕೊಪ್ಪಳ, ಮುಂತಾದವರು ಉಪಸ್ಥಿತರಿದ್ದರು. 

Leave a Reply