ವಿವೇಕಾನಂದ ಶಾಲೆಯಲ್ಲಿ ಹೈ.ಕ. ವಿಮೋಚನಾ ದಿನಾಚರಣೆ

 ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೈದರಾಬಾದ್-ಕರ್ನಾಟಕ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಪ್ರಾಚಾರ್ಯರಾದ ಎ. ಧನಂಜಯನ್ ಧ್ವಜಾರೋಹಣ ಮಾಡಿ, ವಿಮೋಚನಾ ದಿನಾಚರಣೆಯ ಕುರಿತಾಗಿ ಮಾತನಾಡಿದರು.
ಹೈದರಾಬಾದ್-ಕರ್ನಾಟಕದ ವಿಮೋಚನಾ ಹೋರಾಟ ಮತ್ತು ಪ್ರಸ್ತುತ ಸವಾಲುಗಳ ಕುರಿತು ಶಾಲಾ ವಿದ್ಯಾರ್ಥಿನಿ ಕು. ಮಧು, ಶಿಕ್ಷಕರಾದ ಮಾರುತಿ ಚಾಮಲಾಪುರ ಮತ್ತು ಮಹೇಶ ಬಳ್ಳಾರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ನಗದು ಮತ್ತು ಪ್ರಶಸ್ತಿಗಳನ್ನು ವಿತರಿಸಲಾಯಿತು.
ಶಾಲಾ ಉಪಪ್ರಾಚಾರ್ಯೆ ಮಿಸ್. ಪ್ರಮೋದಿನಿ, ಹಿರಿಯ ಶಿಕ್ಷಕ ಎಸ್.ಸಿ. ಹಿರೇಮಠ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಿಕ್ಷಕ ಶರಣಗೌಡ ಸ್ವಾಗತಿಸಿದರೆ, ಇನ್ನೋರ್ವ ಶಿಕ್ಷಕ ಪರಮೇಶ್ವರಯ್ಯ ವಂದಿಸಿದರು. ಕು. ಶರಣು ಬೆಲ್ಲದ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply