ಉಚಿತ ಅಕ್ಕಿ-ಗೋಧಿ : ಮೇ ತಿಂಗಳ ಪಡಿತರ ಬಿಡುಗಡೆ

 ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ ಮೇ ತಿಂಗಳಿಗಾಗಿ ಆಹಾರಧಾನ್ಯ, ತಾಳೆ ಎಣ್ಣೆ, ಉಪ್ಪು, ಸೀಮೆಎಣ್ಣೆ ಬಿಡುಗಡೆ ಮಾಡಿದೆ.
ಅನ್ಯಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ಮತ್ತು ಗೋಧಿ ವಿತರಣೆ ಅಲ್ಲದೆ ಕಡಿಮೆ ದರದಲ್ಲಿ ತಾಳೆ ಎಣ್ಣೆ ಮತ್ತು ಅಯೋಡಿನ್‌ಯುಕ್ತ ಉಪ್ಪು ವಿತರಣೆ ಯೋಜನೆ ಮೇ ೦೧ ರಿಂದ ಜಾರಿಗೆ ಬಂದಿದೆ.  ಕೊಪ್ಪಳ ಜಿಲ್ಲೆಯ ಅಂತ್ಯೋದಯ ಕಾರ್ಡುದಾರರಿಗೆ ೨೯ ಕೆ.ಜಿ ಅಕ್ಕಿ ಮತ್ತು ೬ ಕೆ.ಜಿ ಗೋಧಿ ಉಚಿತವಾಗಿ ಹಾಗೂ ರೂ. ೨೫ ರಂತೆ ೧ ಲೀ. ತಾಳೆ ಎಣ್ಣೆ, ರೂ. ೦೨ ರಂತೆ ೧ ಕೆ.ಜಿ. ಉಪ್ಪು ಬಿಡುಗಡೆ ಮಾಡಲಾಗಿದೆ.  ಬಿಪಿಎಲ್ ಪಡಿತರದಾರರಿಗೆ ಯಾವುದೇ ಪರಿಮಿತಿ ಇಲ್ಲದೆ ಪ್ರತಿ ಸದಸ್ಯರಿಗೆ ೦೩ ಕೆ.ಜಿ ಅಕ್ಕಿ, ೦೨ ಕೆ.ಜಿ. ಗೋಧಿ ಉಚಿತವಾಗಿ ನೀಡಲಾಗುವುದು.  ಪ್ರತಿ ಬಿಪಿಎಲ್ ಕಾರ್ಡಿಗೆ ರೂ. ೨೫ ರಂತೆ ೧ ಲೀ. ತಾಳೆ ಎಣ್ಣೆ, ರೂ. ೦೨ ರಂತೆ ೧ ಕೆ.ಜಿ. ಉಪ್ಪು ಬಿಡುಗಡೆ ಮಾಡಲಾಗಿದೆ.
ಅಂತ್ಯೋದಯ ಪಡಿತರ ಚೀಟಿದಾರರಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  ೧ ಮತ್ತು ೨ ಸದಸ್ಯರಿಗೆ ೩ ಲೀ. ಸೀಮೆಎಣ್ಣೆ, ೩ ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ ಅಂತಹವರಿಗೆ ೫ ಲೀಟರ್.  ಬಿಪಿಎಲ್ ಅನಿಲ ರಹಿತ ಕುಟುಂಬಗಳಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  ೧ ಮತ್ತು ೨ ಜನ ಸದಸ್ಯರಿದ್ದಲ್ಲಿ ೩ ಲೀಟರ್ ಹಾಗೂ ೩ ಮತ್ತು ಮೇಲ್ಪಟ್ಟ ಸದಸ್ಯರಿದ್ದಲ್ಲಿ ೦೫ ಲೀ. ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ.    ಗ್ರಾಮಾಂತರ ಪ್ರದೇಶದ ಎಪಿಎಲ್ ಅನಿಲ ರಹಿತ ಪಡಿತರದಾರರಿಗೆ ೦೨ ಲೀ. ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.  ಸೀಮೆಎಣ್ಣೆ ದರ ಪ್ರತಿ ಲೀಟರ್‌ಗೆ ರೂ.೧೮.೦೦ ರಂತೆ ದರ ನಿಗದಿಪಡಿಸಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ ೬೦೦ ಧೋತಿಗಳು ಮತ್ತು ೩೦೦೦ ಲುಂಗಿಗಳು, ಗಂಗಾವತಿ ತಾಲೂಕಿನಲ್ಲಿ ೧೭೫೬ ಲುಂಗಿಗಳು ಹಾಗೂ ಕುಷ್ಟಗಿ ತಾಲೂಕಿನಲ್ಲಿ ೮೦೭ ಲುಂಗಿಗಳಿದ್ದು, ಅವುಗಳನ್ನು ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಬಿಡುಗಡೆ ಮಾಡಲಾಗುವುದು. ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
Please follow and like us:
error