fbpx

ಪ್ರಥಮ.ಪಿಯು.ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ.

ಗಂಗಾವತಿ – ೧೮ ರಂದು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ.ಪಿಯು.ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಎನ್.ಎಸ್,ಎಸ್. ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು ಇದನ್ನು ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ರವರು ಹಾಗೂ ಅದ್ಯಕ್ಷತೆವಹಿಸಿದ್ದ ಪ್ರಾಚಾರ್ಯರಾದ ಶ್ರೀ ಲಕ್ಷ್ಮಣ ವಡಕಿಯವರು ಉದ್ಘಾಟಿಸಿದರು ಪ್ರಾಸ್ತಾವಿಕವಾಗಿ ಮಾತಾಡಿದ ಕಾಲೇಜಿನ ಹಿರಿಯ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಅನಿಲಕುಮಾರ.ಜಿ ರವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಾಂತಿ. ಶಿಸ್ತು. ಸಂಯಮ ಬೆಳೆಸಿಕೊಂಡು ಸೇವಾ ಮನೋಭಾವನೆಯಿಂದ ಸಮಾಜಮುಖಿಯಾಗಿರಿ ಜೊತೆಗೆ ಗಾಂಧೀಜಿ, ವಿವೇಕಾನಂದರ ಆದರ್ಶಗಳನ್ನು ಪಾಲಿಸಿರಿ ಎಂದು ನುಡಿದರು ದ್ವೀತೀಯ ಪಿ.ಯು.ಸಿ.ವಿದ್ಯಾರ್ಥಿಗಳಾದ ಕುಮಾರ ಮೌನೇಶ. ಹನುಮೇಶ. ನಿಸಾರ ಅಹಮದ್.ಅಂಜಿನಗೌಡ ವೆಂಕಟೇಶ. ಹನುಮಂತ ಹಾಗೂ ಎನ್.ಎಸ್.ಎಸ್.ಹಳೆಯ ವಿದ್ಯಾರ್ಥಿ ಖಾದರ ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದರು ಎನ್.ಎಸ್.ಎಸ್.ಕಾರ್ಯಕ್ರಮಕಾಧಿಕರಿಗಳಾದ ಶ್ರೀ ಸೋಮಶೇಖರಗೌಡ ಇವರುಮಾತನಾಡುತ್ತಾ
         ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ರವರು ಮಾತನಾಡುತ್ತಾ ಗುರು ಮತ್ತು ಗುರಿ ಎರಡು ತುಂಬಾ ಮುಖ್ಯ ಸರ್ಕಾರಿ ಸಂಸ್ಥೆಯ ಶಾಲೆ ಕಾಲೆಜುಗಳು ನಿಮ್ಮ ಮನೆಯಿದ್ದಂತೆ ಇದರ ಬಗ್ಗೆ ಗೌರವ ಅಭಿಮಾನ ನಿಮ್ಮಲ್ಲಿ ಇರಬೇಕು ಎಂದರು
         ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯರಾದ ಶ್ರೀ ಲಕ್ಷ್ಮಣ ವಡಕಿಯವರು ಯುವಕರ ಅಭಿವೃದ್ದಿ ದೇಶದ ಅಭಿವೃದ್ದಿ ಉದಾತ್ತಾ ಚಿಂತನೆಗಳಿಂದ ನಿರ್ದಿಷ್ಠ ಗುರಿ ಛಲಗಳೊಂದಿಗೆ ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಿರಿ ಎಂದು ನುಡಿದರು.ಉಪನ್ಯಾಸಕರಾದ ಚಂದ್ರಶೇಖರ,ಪಾರ್ವತಿ,ಕುಮಾರಸ್ವಾಮಿ.ಅಬ್ದುಲಕರೀಮ್,ಈಶ್ವರಶೆಟ್ಟಿ,ಶ್ರೀದೇವಿ,ಮಂಜುನಾಥ,ಉಪಸ್ಥಿತರಿದ್ದರು. ಗ್ರಂಥಪಾಲಕ ರಮೇಶ ಸ್ವಾಗತಿಸಿದರು ಕುಮಾರ ಶರಣಪ್ಪ ಪ್ರಾರ್ಥಿಸಿದ ಶ್ರೀ ಬಸವರಾಜ ಬೇವಿನಾಳ ಉಪನ್ಯಾಸಕರು ನಿರೂಪಿಸಿದರು ಶ್ರೀಮತಿ ಮಹಾಲಕ್ಷೀ ವಂದಿಸಿದರು.

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಎನ್.ಎಸ್..ಎಸ್ ಉತ್ತಮ ವೇದಿಕೆಯಾಗಿದೆ,ಸಮಾಜದ ಸಮಸ್ಯೆಗಳಿಗೆ ಸ್ಫಂದಿಸುವುದು ಯುವಕರ ಪ್ರಮುಖ ಕರ್ತವ್ಯವಾಗಿದೆ ಎಂದು ನುಡಿದರು

Please follow and like us:
error

Leave a Reply

error: Content is protected !!