ಗಂಗಾವತಿಬಂದ್ :ನೀರಸ ಪ್ರತಿಕ್ರಿಯೆ

ಗಂಗಾವತಿ ; ಗಂಗಾವತಿಯ ಎಪಿಎಂಸಿಯನ್ನು ಡಿಗ್ರೇಡ್ ಮಾಡುವ ಸಂಬಂಧ ಸರಕಾರ ಹೊರಡಿಸಿರುವ ಆಜ್ಞೆಯ ವಿರುದ್ದ ಗಂಗಾವತಿಯ ಸಿಬಿಎಸ್ ಗಂಜ್ ನ ವರ್ತಕರು, ಹಮಾಲರು ಹಾಗೂ ದಲ್ಲಾಗಳಿಗಳು ಕರೆನೀಡಿದ್ದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಬಂದ್ ಇದ್ದರೂ ಕೆಲವೆಡೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು. ಹಾಗೂ ವ್ಯಾಪಾರ ವಹಿವಾಟುಗಳು ಸಹಜ ಎನ್ನುವಂತೆ ನಡೆದವು. ವಾಹನ ಸಂಚಾರಕ್ಕೆ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ನಡೆದವು. ಗಂಗಾವತಿ ಎಪಿಎಂಸಿ ವಿಭಜನೆ ವಿರೋಧಿಸಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನಗರದ ವರ್ತಕರು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಗಂಗಾವತಿಯ ಗಂಜ್ ನ ಆದಾಯಕ್ಕೆ ಪೆಟ್ಟು ನೀಡಲೆಂದೇ ಈ ವಿಭಜನೆ ಮಾಡಲಾಗುತ್ತಿದ್ದು ಇದರಿಂದ ಗಂಗಾವತಿಗೆ ದೊಡ್ಡ ಪೆಟ್ಟು ಬೀಳಲಿದೆ. ಈ ಆದೇಶ ಹಿಂದಕ್ಕೆ ಪಡೆಯಬೇಕು ಇಲ್ಲದಿದ್ದರೆ ಹಂತ ಹಂತವಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಲ್ಲಿಕಾರ್ಜುನ ನಾಗಪ್ಪ ಎಚ್ಚರಿಸಿದರು. ಎಪಿಎಂಸಿಯಿಂದ ಆರಂಭವಾದ ಮೆರವಣಿಗೆಯು ಕೃಷ್ಣದೇವರಾ ಯ ಸರ್ಕಲ್ ತನಕ ನಡೆಯಿತು. ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Leave a Reply