ಭಾಗ್ಯನಗರದಲ್ಲಿ ನ.೧೩ ರಂದು ಜಿಲ್ಲಾಮಟ್ಟದ ಯುವ ಕಾರ್ಯಾಗಾರ

ಕೊಪ್ಪಳ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ಸುಭಾಸ್‌ಚಂದ್ರ ಬೋಸ್ ಯುವಕ ಸಂಘ, ಭಾಗ್ಯನಗರ ಇವರ ಸಂಯುಕ್ತಾಶ್ರಯದಲ್ಲಿ ನ. ೧೩ ರಂದು ಬೆಳಿಗ್ಗೆ ೧೦ ಗಂಟೆಗೆ ಭಾಗ್ಯನಗರದ ಸರ್ಕಾರಿ ಪದ”ಪೂರ್ವ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಯುವ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು ನೆರವೇರಿಸಲಿದ್ದು, ಶಾಸಕ ಸಂಗಣ್ಣ ಕರಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ, ಸಂಸದ ಶಿವರಾಮಗೌಡ, ಶಾಸಕರುಗಳಾದ ಹಾಲಪ್ಪ ಆಚಾರ್, ಶಶಿಲ್ ನಮೋಶಿ, ಹೆಚ್.ಸಿ. ನೀರಾವರಿ, ಮನೋಹರ ಮಸ್ಕಿ, ಅಮರೇಗೌಡ ಪಾಟೀಲ್ ಬಯ್ಯಾಪುರ, ಪರಣ್ಣ ಮುನವಳ್ಳಿ, ಈಶಣ್ಣ ಗುಳಗಣ್ಣವರ ಸೇರಿದಂತೆ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್. ಮೂರ್ತಿ ಮತ್ತಿತರ ಚುನಾತ ಪ್ರತಿನಿದಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು. ಈ ಜಿಲ್ಲಾ ಮಟ್ಟದ ಯುವ ಕಾರ್ಯಾಗಾರದಲ್ಲಿ ೨೦೦ ಶಿಬಿರಾರ್ಥಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಕೇಂದ್ರ ಕಚೇರಿಂದ ಆದೇಶ ಬಂದಿದ್ದು, ೨೦೧೦-೧೧ನೇ ಸಾಲಿಗೆ ನೊಂದಣಿಯಾದ ಹಾಗೂ ನವಿಕರಣಗೊಂಡ ಸಂಘ ಸಂಸ್ಥೆಗಳಿಗೆ ಹಾಗೂ ಜಿಲ್ಲಾಮಟ್ಟದ ಯುವಜನ ಮೇಳಗಳಲ್ಲಿ ಪ್ರಶಸ್ತಿ ಪಡೆದ ಸಂಘಗಳಿಗೆ ಈಗಾಗಲೇ ಪತ್ರ ಮೂಲಕ ತಿಳಿಸಲಾಗಿದೆ. ಸಂಬಂಧಪಟ್ಟ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಯುವ ಕಾರ್ಯಾಗಾರದಲ್ಲಿ ತಪ್ಪದೇ ಹಾಜರಾಗಬೇಕೆಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.
Please follow and like us:
error