ಬಾರ್ಕೋಲು ಚಳುವಳಿ

ರೈತರ ಮೇಲೆ ಲಾಠಿ ಬೀಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ರೈತ ಸಂಘ, ಹಸೀರು ಸೇನೆ ಬಾರ್ಕೋಲು ಚಳುವಳಿಯನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಸೂಕ್ತ ಬಂದೋಬಸ್ತ ಮಾಡಲಾಗಿದ್ದು, ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಗಳೂ ಸಹ ನಡೆಯುತ್ತಿರುವುದರಿಂದ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವ ನಿರೀಕ್ಷೆ ಇದೆ.

ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರ ಬಂಧನ ,ಬಿಡುಗಡೆ
ಕೊಪ್ಪಳ ೧೦ : ನಿನ್ನೆ ಹೆದ್ದಾರಿ ತಡೆ ನಡೆಸಿದ ಡಿ ಎಚ್ ಪೂಜಾರ್ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದರು. ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಸಂಜೆ ಅವರನ್ನು ಬಿಡುಗಡೆ ಗೊಳಿಸಿದರು.

Leave a Reply