ರೆಡ್ಡಿ ಸಮಾಜ ಸಂಘಟನೆಯಾಗಬೇಕು – ಸಿ.ವಿ.ಚಂದ್ರಶೇಖರ

ಕೊಪ್ಪಳ,ಮೇ.೧೦: ರೆಡ್ಡಿ ಸಮಾಜ ಸಂಘಟನೆಯಾಗಬೇಕು. ಸಂಘಟನೆ ಬೇರೆ ಸಮಾಜದವರಿಗೆ ಮಾದರಿಯಾಗಬೇಕು. ಸಂಘಟಕರಿಗೆ ತ್ಯಾಗ, ತಾಳ್ಮೆ ಅಗತ್ಯವಾಗಿದೆ. ಸಂದರ್ಭ ಬಂದಾಗ ಸಮಾಜದ ಮುಖಂಡರು ಒಗ್ಗಟ್ಟಾಗಿ ಒಕ್ಕೋರಲಿನಿಂದ ಹೋರಾಡಬೇಕೆಂದು ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಸಿ.ವಿ.ಚಂದ್ರಶೇಖರ ಹೇಳಿದರು.
ಅವರು ಮಂಗಳವಾರ ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಮಹಾಯೋಗಿ ವೇಮನ ವೇದಿಕೆಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಹಾಗೂ ದೇವಸ್ಥಾನದ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಥಮ ದರ್ಜೆ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾದ ಸುರೇಶ ಭೂಮರಡ್ಡಿ ಮೆರವಣಿಗೆ ಉದ್ಘಾಟಿಸಿದರು.
ರೆಡ್ಡಿ ಸಮಾಜದ ಮುಖಂಡರು ಹಾಗೂ ವಾಣಿಜ್ಯೋದ್ಯಮಿಗಳಾದ ಪ್ರಭು ಹೆಬ್ಬಾಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೆಡ್ಡಿ ಸಮಾಜದ ತಾಲೂಕ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹೇಮರಡ್ಡಿ ಮಲ್ಲಮ್ಮ ಮತ್ತು ವೇಮನರು ರೆಡ್ಡಿ ಜನಾಂಗದ ಮಹಾನ್ ವ್ಯಕ್ತಿಗಳಾಗಿದ್ದರು. ಈ ಈರ್ವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದರು.
ಕಿನ್ನಾಳ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯರಾದ ಡಾ.ವಿ.ಬಿ.ರಡ್ಡೆರ್ ಉಪನ್ಯಾಸ ನೀಡಿದರು. ರೆಡ್ಡಿ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಸಂಗಪ್ಪ ವಕ್ಕಳದ್ ಮಾತನಾಡಿ, ರೆಡ್ಡಿ ಸಮಾಜದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿದಾಗ ಮಾತ್ರ ಸಮಾಜ ಪ್ರಗತಿ ಹೊಂದಲು ಸಾಧ್ಯ ಎಂದರು.
ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ತಾವು ೧೫ ವರ್ಷಗಳಿಂದಲೂ ಸಂಗ್ರಹಿಸಿದ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನ ಕುರಿತು ಗ್ರಂಥ ಹೊರತರುವುದಾಗಿ ಹೇಳಿ ಜನಪದ ಗೀತೆಗಳನ್ನು ಹಾಡಿದರು. ಈ ಗ್ರಂಥವನ್ನು ಪ್ರಭು ಹೆಬ್ಬಾಳರವರು ತಮ್ಮ ತಂದೆ ಶಿವಪ್ಪ ಹೆಬ್ಬಾಳರವರ ಹೆಸರಿನಲ್ಲಿ ಮುದ್ರಿಸಿಕೊಡುವುದಾಗಿ ಭರವಸೆ ನೀಡಿದರು.
ವೇದಿಕೆಯ ಮೇಲೆ ಜಿ.ಪಂ.ಮಾಜಿ ಅಧ್ಯಕ್ಷರಾದ ಹೆಚ್.ಎಲ್.ಹಿರೇಗೌಡರ, ಮಾಜಿ ಸದಸ್ಯರಾದ ಈಶಪ್ಪ ಮಾದಿನೂರು, ನ್ಯಾಯವಾದಿಗಳಾದ ಎಸ್.ವೆಂಕಾರೆಡ್ಡಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಸಂಗಮೇಶ ಡಂಬಳ, ಬಿಜೆಪಿ ಮುಖಂಡರಾದ ವಿರುಪಾಕ್ಷಪ್ಪ ನವೋದಯ, ಪ್ರಥಮ ದರ್ಜೆ ಗುತ್ತಿಗೆದಾರ ಕಾಶಿನಾಥರೆಡ್ಡಿ ಆವಜಿ, ಎಪಿಎಂಸಿ ಸದಸ್ಯರಾದ ಹನುಮರಡ್ಡಿ ಹಂಗನಕಟ್ಟಿ, ತಾ.ಪಂ.ಮಾಜಿ ಸದಸ್ಯರದ ಬಸವರಡ್ಡಿ ಹಳ್ಳಿಕೇರಿ, ಹಾಲು ಉತ್ಪಾದಕರ ಒಕ್ಕೂಟದ ಬಳ್ಳಾರಿ, ರಾಯಚೂರು, ಕೊಪ್ಪಳ ನಿರ್ದೇಶಕರಾದ ನಾಗನಗೌಡ ನಂದನಗೌಡ್ರು, ಕೆ.ಒ.ಎಫ್. ನಿರ್ದೇಶಕರಾದ ಸುರೇಶ ಮಾದಿನೂರು, ಹಾವೇರಿ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರಾದ ಶೇಖರಗೌಡ ಕುರಡಗಿ, ನ್ಯಾಯವಾದಿಗಳಾದ ಬಿ.ಶರಣಪ್ಪ, ತಾಲೂಕ ರೆಡ್ಡಿ ಸಮಾಜ ಕಾರ್ಯದರ್ಶಿ ಹೇಮರಡ್ಡಿ ಬಿಸರಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೃಷ್ಣರೆಡ್ಡಿ ಗಲಬಿ, ಗ್ರಾ.ಪಂ.ಸದಸ್ಯ ತಿಮ್ಮರಡ್ಡಿ ಸಣ್ಣ ಮುದಿಯಪ್ಪನವರ, ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘದ ನಿರ್ದೇಶಕರದ ಮಹಾಂತಗೌಡ ಪಾಟೀಲ್, ಪ್ರಗತಿಪರ ರೈತ ಈಶಪ್ಪ ಗದ್ದಿಕೇರಿ, ಹೇಮರಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ ಎನ್.ವೈ.ಮಂಜುನಾಥ ರೆಡ್ಡಿ, ಕಾರ್ಯದರ್ಶಿ ಪರಮೇಶ ರೆಡ್ಡಿ ಅವಣ್ಣೆರ, ಉಪಾಧ್ಯಕ್ಷ ವಿಠೋಬರಡ್ಡಿ ರೊಡ್ಡರ್, ಖಜಾಂಚಿ ಹೊನ್ನಪ್ಪ ರಾಮರಡ್ಡಿ, ಸಂಘಟನ ಕಾರ್ಯದರ್ಶಿ ಶರಣಬಸ್ಪ ಬಸಪ್ಪ ಮುದಿಯಪ್ಪನವರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಡಾ.ವಿ.ಬಿ.ರಡ್ಡೆರ್, ಹನುಮಂತಪ್ಪ ಅಂಡಗಿ ಚಿಲವಾಡಗಿ ಸೇರಿದಂತೆ ಗ್ರಾಮದಲ್ಲಿ ಸರ್ಕಾರಿ ಉದ್ಯೋಗ ಪಡೆದ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಯಮುನಾ ಸಂಗಡಿಗರು ಪ್ರಾರ್ಥಿಸಿದರು. ರಾಮನಗೌಡ ಪೊ.ಪಾ. ಸ್ವಾಗತಿಸಿದರು. ತಾಲೂಕ ಕಸಾಪ ಅಧ್ಯಕ್ಷ ಜಿ.ಎಸ್.ಗೋನಾಳ ಹಾಗೂ ಶ್ರೀನಿವಾಸ ರಾಮರಡ್ಡಿ ನಿರೂಪಿಸಿದರು. ಶರಣಪ್ಪ ರಡ್ಡೆರ ವಂದಿಸಿದರು.

Please follow and like us:
error