ಪೊಲೀಸ್ ಉಪಾಧೀಕ್ಷಕ ಬಸವರಾಜ ಶಿರೂರ ಮಠ ಅವರಿಗೆ ರಾಷ್ಟ್ರಪತಿ ಪದಕ


ಕೊಪ್ಪಳ ಆ. : ಕೊಪ್ಪಳ ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಅಪರಾಧ ತನಿಖಾ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬಸವರಾಜ ಶಿರೂರ ಮಠ ಅವರು ತಮ್ಮ ಉತ್ತಮ ಸೇವೆಗಾಗಿ ೨೦೧೦ ನೇ ಸಾಲಿನ ರಾಷ್ಟ್ರಪತಿ ಪದಕ ಪಡೆದಿದ್ದು, ಕರ್ನಾಟಕದ ಮಾನ್ಯ ರಾಜ್ಯಪಾಲರು ಇತ್ತೀಚೆಗೆ ಬಸವರಾಜ ಶಿರೂರ ಮಠ ಅವರಿಗೆ ಬೆಂಗಳೂರಿನಲ್ಲಿ ಪದಕ ಪ್ರದಾನ ಮಾಡಿದರು.
ಅಪರಾಧ ತನಿಖಾ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಶಿರೂರ ಮಠ ಅವರು ಕೊಪ್ಪಳ ಜಿಲ್ಲೆಯ ಕುಕನೂರು ಬಳಿಯ ದ್ಯಾಂಪುರದವರಾಗಿದ್ದು, ಬೆಳಗಾವಿ ಜಿಲ್ಲೆಯ ಬೆರಳು ಮುದ್ರೆ ಸಂಗ್ರಹಾಲಯದ ಪೊಲೀಸ್ ಉಪಾಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕೊಪ್ಪಳ ಜಿಲ್ಲೆಯ ಹುದ್ದೆಯ ಪ್ರಭಾರವನ್ನೂ ಇವರು ಹೊಂದಿದ್ದಾರೆ. ೧೯೭೯ ರಿಂದಲೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದುವರೆಗೂ ಸುಮಾರು ೬೫೦ ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ಬೆರಳು ಮುದ್ರೆಯಿಂದ ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಉತ್ತಮ ಸೇವೆಗೆ ಇದೀಗ ಸರ್ಕಾರ ರಾಷ್ಟ್ರಪತಿ ಪದಕ ಪ್ರದಾನ ಮಾಡಿ ಗೌರವಿಸಿದೆ. ಕೊಪ್ಪಳ ಜಿಲ್ಲೆಯ ಬೆರಳು ಮುದ್ರೆ ಘಟಕದ ಅಪರಾಧ ತನಿಖಾ ವಿಭಾಗದ ಆರಕ್ಷಕ ಉಪನಿರೀಕ್ಷಕರು ಸೇರಿದಂತೆ ಎಲ್ಲ ಸಿಬ್ಬಂದಿಗಳು ಬಸವರಾಜ ಶಿರೂರ ಮಠ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ

Leave a Reply