ಉಪಚುನಾವಣೆ : ಅಂತಿಮ ದಿನದಂದು ೧೨ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೆ. ೯ ರಂದು ಶುಕ್ರವಾರ ೧೨ ಅಭ್ಯರ್ಥಿಗಳಿಂದ ಒಟ್ಟು ೧೪ ನಾಮಪತ್ರ ಸಲ್ಲಿಕೆಯಾಗಿದೆ.
  ಮಿಟ್ಟಲಕೋಡ್ ಗ್ರಾಮದ ಸಂಗಮೇಶ್ ಹಿರೇಮಠ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅದೇ ರೀತಿ ಭಾಗ್ಯನಗರದ ವಿಠ್ಠಪ್ಪ ಗೋರಂಟ್ಲಿ- ಪಕ್ಷೇತರ, ಕೊಪ್ಪಳದ ರಾಜಶೇಖರ ಶರಣಯ್ಯ ಪುರಾಣಿಕ ಮಠ- ಪಕ್ಷೇತರ, ಕೊಪ್ಪಳದ ಸಂಗಣ್ಣ ಕರಡಿ- ಬಿಜೆಪಿ, ಹಗರಿಬೊಮ್ಮನಹಳ್ಳಿಯ ಮನ್ಸೂರ್ ಬಾಷಾ- ಪಕ್ಷೇತರ, ಹಿಟ್ನಾಳ್ ಗ್ರಾಮದ ಕೆ. ಬಸವರಾಜ್ ಹಿಟ್ನಾಳ- ಕಾಂಗ್ರೆಸ್, ಕೊಪ್ಪಳದ ಮೌನೇಶ್ ಶಂಕರಪ್ಪ- ಪಕ್ಷೇತರ, ಕುಷ್ಟಗಿ ತಾಲೂಕು ತಳುವಗೇರಾದ ಶರಣಗೌಡ ನೀಲನಗೌಡ- ಆರ್.ಪಿ.ಐ. (ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ), ಕವಲೂರಿನ ಪ್ರದೀಪ್ ವಿರೂಪಾಕ್ಷಗೌಡ- ಜೆ.ಡಿ.ಎಸ್., ಗಂಗಾವತಿಯ ಚಕ್ರವರ್ತಿ ನಾಯಕ್- ಪಕ್ಷೇತರ, ಬೆಂಗಳೂರಿನ ಟಿ. ದಾಸರಹಳ್ಳಿಯ ಶಂಭುಲಿಂಗೇಗೌಡ- ಪಕ್ಷೇತರ ಹಾಗೂ ಹೊಸನಿಂಗಾಪುರದ ರಾಮುಲು ತಂದೆ ವಾಸುದೇವ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
  ಇದರಿಂದಾಗಿ ಇದುವರೆಗೂ ಒಟ್ಟು ೧೯ ಅಭ್ಯರ್ಥಿಗಳಿಂದ ೨೯ ನಾಮಪತ್ರ ಸಲ್ಲಿಕೆಯಾದಂತಾಗಿದ್ದು,  ನಾಮಪತ್ರಗಳ ಪರಿಶೀಲನಾ ಕಾರ್ಯ ಸೆ. ೧೦ ರಂದು ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಸೆ. ೧೨ ಕೊನೆಯ ದಿನಾಂಕವಾಗಿದ್ದು, ಸೆ. ೨೬ ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೨೧೦ ಮತಗಟ್ಟೆಗಳಲ್ಲಿ ಮತದಾನ ಕಾರ್ಯ ನಡೆಯಲಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ
Please follow and like us:
error