ಲೂಟಿ, ಜೇಲು, ಅನಾಚಾರಸಂಸ್ಕೃತಿಗೆ ತಿಲಾಂಜಲಿ ಹೇಳಿ – ಹನುಮಂತರಾಯ್ ಕರೆ

ನಗರದ ಶ್ರೀ ಗವಿಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿಯವರು ಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಜ್ವಲ ಭವಿಷ್ಯವಿದ್ದು, ಆಡಳಿತಾರೂಢ, ಭ್ರಷ್ಟ ಬಿ.ಜೆ.ಪಿ. ಸರಕಾರವನ್ನು ಬೇರು ಸಮೇತ ಕಿತ್ತೊಗೆದು ಕರ್ನಾಟಕದಲ್ಲಿ ನಿಷ್ಠೆ, ತತ್ವ, ಸಿದ್ಧಾಂತದ ಆಧಾರದ ಮೇಲೆ ಆಡಳಿತ ನಡೆಸುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ ಬಿ.ಜೆ.ಪಿ.ಯ ಅನಾಚಾರ, ಅತ್ಯಾಚಾರ ಸರಕಾರಕ್ಕೆ ತಿಲಾಂಜಲಿ ಹೇಳಬೇಕು. ರಾಷ್ಟ್ರ ಕಂಡರಿಯದ, ಕೇಳಿರದ ಸದನದಲ್ಲಿ ಸಚಿವರು ಮಾಡಿರುವ ಘೋರ ಅಪರಾಧವನ್ನು ಕರ್ನಾಟಕದ ಯಾವ ವರ್ಗದ ಜನರೂ ಸಹಿಸಲಾರರು ಎಂದು ಹನುಮಂತರಾಯರು ಈ ಸಂದರ್ಭದಲ್ಲಿ  ಬಸವರಾಜ ರಾಯರೆಡ್ಡಿ, ಕೆ.ಬಸವರಾಜ ಹಿಟ್ನಾಳ, ಅಮರೇಗೌಡ ಭಯ್ಯಾಪೂರ ಎಸ್.ಬಿ.ನಾಗರಳ್ಳಿ,ವೆಂಕಟರಾವ್ ಘೋರ್ಪಡೆ,  ಮರ್ದಾನಅಲಿ ಅಡ್ಡೆವಾಲೆ,  ಶಾಂತಣ್ಣ ಮುದಗಲ್, ಶ್ರೀಮತಿ ಸೀತಾ ಗೂಳಪ್ಪ ಹಲಗೇರಿ,  ಬಿ.ಯಮನೂರಪ್ಪ ಸಿಂಗನಾಳ, ರಾಘವೇಂದ್ರ ಹಿಟ್ನಾಳ, ಹೆಚ್.ಎಲ್. ಹಿರೇಗೌಡರ್,ಟಿ.ಜನಾರ್ಧನ, ಅಮಜದ್ ಪಟೇಲ್, ಜಾಕಿರ್ ಕಿಲ್ಲೇದಾರ, ಕಾಟನ್‌ಪಾಶಾ, ಶ್ರೀಮತಿ ಇಂದಿರಾ ಭಾವಿಕಟ್ಟಿ, ಶ್ರೀಮತಿ ಶಕುಂತಲಾ ಹುಡೇಜಾಲಿ,  ದ್ಯಾಮಣ್ಣ ಚಿಲವಾಡ್ಗಿ, ಗವಿಸಿದ್ದಪ್ಪ ಕಂದಾರಿ, ಗವಿಸಿದ್ದಪ್ಪ ಮುದುಗಲ್, ಈಶಪ್ಪ ಮಾದಿನೂರು, ಹನುಮರೆಡ್ಡಿ ಹಂಗನಕಟ್ಟಿ. ಕೃಷ್ಣ ಇಟ್ಟಂಗಿ ಕಾರ್ಯಕ್ರಮ ನಿರೂಪಿಸಿ ಟಿ. ಜನಾರ್ದನ ವಂದನಾರ್ಪಣೆ ಸಲ್ಲಿಸಿದರು.
Please follow and like us:
error