ಸುಕ್ಷೇತ್ರ ಗುತ್ತೂರು ಗ್ರಾಮದಲ್ಲಿ ಸಾಮೂಹಿಕ ವಿವಾಹ ಹಾಗೂ ನೂತನ ರಥೋತ್ಸವ

  • ಕೊಪ್ಪಳ :- ದಿ. ೧೩/೧೨/೨೦೧೨ ರಂದು ಗುರುವಾರದಂದು ಯಲಬುರ್ಗಾ ತಾಲೂಕಿನ ಗುತ್ತೂರು ಗ್ರಾಮದಲ್ಲಿ ಶ್ರೀ ಮಾರುತೇಶ್ವರ, ಶ್ರೀ ಕಲ್ಯಾಣ ಬಸವೇಶ್ವರ ಹಾಗೂ ನಿರುಪಾದೇಶ್ವರ ಜಾತ್ರೋತ್ಸವ ಮತ್ತು ರುದ್ರಾಭಿಷೇಕ ಜರಗುವುದು. ೧೪/೧೨/೨೦೧೨ ರಂದು ಬೆಳಿಗ್ಗೆ ೬ ಗಂಟೆಗೆ ಹೋಮ ೦೯ ಗಂಟೆಗೆ ಲಘು ಉತ್ಸವ ೧೨:೩೦ ಕ್ಕೇ ಸಾಮೋಹಿಕ ವಿವಾಹ ೦೨:೩೦ ಕ್ಕೆ ಧರ್ಮಸಭೆ ಸಾಯಂಕಾಲ ೦೫ ಗಂಟೆಗೆ ನೂತನ ರಥತೋತ್ಸವ ರಾತ್ರಿ ೦೯ ಗಂಟೆಗೆ ಶ್ರೀ ಶರಣಬಸವೇಶ್ವರ ಪುರಾಣ ಮಹಾ ಮಂಗಳದ ಕಾರ್ಯಕ್ರಮಗಳು ಜರಗುವವು.
    ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಸ್ವ ಜ| ಅಭೀನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಕೊಪ್ಪಳ, ದಾಸೋಹರತ್ನ ಶ್ರೀ ಶ್ರೀ ಬ್ರಹ್ಮ ಶ್ರೀ ವಿರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ ವಹಿಸುವರು, ನೂತನ ತೆರಿಗೆ ಶ್ರೀ ಮಾರುತೇಶ್ವರ ಯುವಕ ಮಂಡಳದಿಂದ ೨ ನಂದಿಕೊಲಗಳನ್ನು ಭಕ್ತಿ ಸೇವೆ ಸಲ್ಲಿಸಿ, ದೇಣಿಗೆಯನ್ನು ನೀಡಿರುತ್ತಾರೆ. ಶ್ರೀ ಸ್ವಾಮಿ ವಿವೇಕಾನಂದ ಸಂಘದವರು ನೂತನ ತೇರಿಗೆ ೬೧ ಸಾವಿರ ರುದ್ರಾಕ್ಷಿ ವಂದಿದ ಸರವನ್ನು ಭಕ್ತಿಯ ಕಾಣಿಕೆಯಾಗಿ ನೀಡಿರುತ್ತಾರೆ.

Related posts

Leave a Comment