fbpx

ಕೊಪ್ಪಳ ಲೋಕಸಭಾ ಕ್ಷೇತ್ರ : ಒಂದು ಹಿನ್ನೋಟ

 ಕೊಪ್ಪಳ ಜಿಲ್ಲೆಯು ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಕ್ಷೇತ್ರವಾಗಿದ್ದು, ವಿಜಯನಗರ ಸಾಮ್ರಾಜ್ಯದ ಮೂಲ ಸ್ಥಳವಾಗಿರುವ ಆನೆಗುಂದಿ, ಕೊಪ್ಪಳದಲ್ಲಿನ ಅಶೋಕನ ಶಿಲಾ ಶಾಸನ ಮುಂತಾದವುಗಳು ಈ ಜಿಲ್ಲೆಗೆ ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ನೀಡಿವೆ.  ಇಂತಹ ಕೊಪ್ಪಳ ಜಿಲ್ಲೆಯ ಲೋಕಸಭಾ ಚುನಾವಣಾ ಇತಿಹಾಸವನ್ನು ಗಮನಿಸಿದಾಗ ಚುನಾವಣೆಯಿಂದ ಚುನಾವಣೆಗೆ ಜಿದ್ದಾ ಜಿದ್ದಿನ ಸ್ಪರ್ಧೆ

ನಡೆದಿರುವುದು ವಿಶೇಷ.

  ದೇಶದಲ್ಲಿ ಪ್ರಥಮ ಬಾರಿಗೆ ೧೯೫೨ ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಅಸ್ತಿತ್ವದಲ್ಲಿ ಇರಲಿಲ್ಲ.  ಬದಲಿಗೆ ಅದು ಕುಷ್ಟಗಿ ಲೋಕಸಭಾ ಕ್ಷೇತ್ರವಾಗಿದ್ದು, ನಂತರದ ದಿನಗಳಲ್ಲಿ ಅಂದರೆ ೧೯೫೭ ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರವಾಗಿ ಪರಿವರ್ತಿತಗೊಂಡಿದೆ.  ಕ್ಷೇತ್ರ ಪುನರ್ ವಿಂಗಡಣೆಯ ನಂತರ ಕೊಪ್ಪಳ ಲೋಕಸಭಾ ಕ್ಷೇತ್ರವು ಕುಷ್ಟಗಿ, ಕೊಪ್ಪಳ, ಗಂಗಾವತಿ, ಕನಕಗಿರಿ (ಪ.ಜಾ.), ಯಲಬುರ್ಗಾ, ರಾಯಚೂರು ಜಿಲ್ಲೆಯ ಸಿಂಧನೂರು , ಮಸ್ಕಿ (ಪ.ಪಂ.) ಹಾಗೂ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಸೇರಿದಂತೆ ಒಟ್ಟು ೦೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.  ಕ್ಷೇತ್ರ ಪುನರ್ ವಿಂಗಡಣೆಯ ಕಾರಣದಿಂದಾಗಿ ಈ ಮೊದಲು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹೊಸಪೇಟೆ ಹಾಗೂ ಮುಂಡರಗಿ ವಿಧಾನಸಭಾ ಕ್ಷೇತ್ರಗಳನ್ನು ತೆಗೆದು, ಅವುಗಳ ಬದಲಿಗೆ ರಾಯಚೂರು ಜಿಲ್ಲೆಯ ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ವಿಧಾನಸಭಾ ಕ್ಷೇತ್ರಗಳು ಸೇರ್ಪಡೆಗೊಂಡಿವೆ.
  ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ ಪುರುಷರು- ೭೫೪೬೦೫ ಹಾಗೂ ಮಹಿಳೆಯರು- ೭೪೮೧೮೦ ಸೇರಿದಂತೆ ಒಟ್ಟು ೧೫೦೨೭೮೫ ಮತದಾರರಿದ್ದು, ಕಳೆದ ೨೦೦೯ ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿದ್ದ ಮತದಾರರ ಸಂಖ್ಯೆ ೧೩೬೩೧೦೪.  ಕಳೆದ ಚುನಾವಣೆ ಸಂದರ್ಭದಲ್ಲಿನ ಮತದಾರರ ಸಂಖ್ಯೆಗಿಂತ ಸದ್ಯದ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದು ವಿಶೇಷವಾಗಿದೆ. ಚುನಾವಣಾ ಆಯೋಗ ಮತದಾರರ ನೋಂದಣಿ ಹಾಗೂ ಜಾಗೃತಿ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮದಡಿ ಹಮ್ಮಿಕೊಂಡ ಹಲವಾರು ವಿಶೇಷ ಕಾರ್ಯಕ್ರಮಗಳು ಈ ಹೆಚ್ಚಳಕ್ಕೆ ಕಾರಣವಾಗಿರಬಹುದಾಗಿದೆ.
೧೫೦೨೭೮೫ ಮತದಾರರು, ೧೮೩೬ ಮತಗಟ್ಟೆ :  ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ೭೫೪೬೦೫ ಪುರುಷ, ೭೪೮೧೮೦ ಮಹಿಳೆ ಸೇರಿದಂತೆ ಒಟ್ಟು ೧೫೦೨೭೮೫ ಮತದಾರರಿದ್ದಾರೆ ಅಲ್ಲದೆ ಕ್ಷೇತ್ರದಲ್ಲಿ ಒಟ್ಟು ೧೮೩೬ ಮತಗಟ್ಟೆಗಳಿವೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ  ೨೫೨ ಮತಗಟ್ಟೆಗಳಿದ್ದು, ೧೦೦೯೦೭-ಪುರುಷ, ೯೮೨೪೬- ಮಹಿಳೆ ಸೇರಿದಂತೆ ಒಟ್ಟು ೧೯೯೧೫೩ ಮತದಾರರಿದ್ದಾರೆ.  ಕನಕಗಿರಿ ಕ್ಷೇತ್ರದಲ್ಲಿ ೨೩೯ ಮತಗಟ್ಟೆಗಳಿದ್ದು, ೯೨೭೧೩-ಪುರುಷ, ೯೩೫೮೬- ಮಹಿಳೆ ಸೇರಿದಂತೆ ಒಟ್ಟು ೧೮೬೨೯೯ ಮತದಾರರಿದ್ದಾರೆ.  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ೨೧೧ ಮತಗಟ್ಟೆಗಳಿದ್ದು, ೮೭೫೫೬-ಪುರುಷ, ೮೭೩೨೫-ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೭೪೮೮೧ ಮತದಾರರಿದ್ದಾರೆ.  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ೨೩೭ ಮತಗಟ್ಟೆಗಳಿದ್ದು, ೯೪೨೨೬-ಪುರುಷ, ೯೦೪೪೪- ಮಹಿಳೆ ಹೀಗೆ, ಒಟ್ಟು ೧೮೪೬೭೦ ಮತದಾರರಿದ್ದಾರೆ.  ಕೊಪ್ಪಳ ಕ್ಷೇತ್ರದಲ್ಲಿ ೨೫೩ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೧೦೭೦೩೮-ಪುರುಷ, ೧೦೪೭೨೫-ಮಹಿಳೆ ಸೇರಿದಂತೆ ಒಟ್ಟು ೨೧೧೭೬೩ ಮತದಾರರಿದ್ದಾರೆ.  ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರದಲ್ಲಿ ೨೩೭ ಮತಗಟ್ಟೆಗಳಿದ್ದು, ೧೦೧೩೪೭-ಪುರುಷ, ೧೦೧೨೦೮- ಮಹಿಳೆ ಸೇರಿದಂತೆ ಒಟ್ಟು ೨೦೨೫೫೫ ಮತದಾರರಿದ್ದಾರೆ.  ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ೨೦೪ ಮತಗಟ್ಟೆಗಳಿದ್ದು, ೮೪೩೩೭-ಪುರುಷ, ೮೪೦೦೧-ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೬೮೩೩೮ ಮತದಾರರಿದ್ದಾರೆ.  ಬಳ್ಳಾರಿ ಜಿಲ್ಲೆ ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ೨೦೩ ಮತಗಟ್ಟೆಗಳಿದ್ದು, ೮೬೪೮೧-ಪುರುಷ, ೮೮೬೪೫- ಮಹಿಳೆ ಹೀಗೆ, ಒಟ್ಟು ೧೭೫೧೨೬ ಮತದಾರರಿದ್ದಾರೆ.
  ಭಾರತ ದೇಶದ ಸ್ವಾತಂತ್ರ್ಯಾ ನಂತರ ೧೯೫೨ ರಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಭ್ಯರ್ಥಿ ಮಾಧವರಾವ್ ಅನ್ವರಿ ಅವರನ್ನು ೪೪೧೫೯ ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.   ೧೯೫೭ ರಲ್ಲಿ ನಡೆದ ಎರಡನೆ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿದ್ದ ಸಂಗಣ್ಣ ಅಂದಾನಪ್ಪ ಅಗಡಿ ಅವರು ಪಕ್ಷೇತರ ಅಭ್ಯರ್ಥಿಯಾದ ಶಿವಮೂರ್ತಿ ಸ್ವಾಮಿ ಅಳವಂಡಿ ಅವರಿಗಿಂತ ೧೦೪೬೭ ಹೆಚ್ಚು ಮತಗಳನ್ನು ಪಡೆದು ವಿಜಯಿಯಾದರು.  ಆದರೆ ೧೯೬೨ ರಲ್ಲಿ ನಡೆದ ಚುನಾವಣೆಯಲ್ಲಿ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಲೋಕಸೇವಕ ಸಂಘ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೇಸ್ ಅಭ್ಯರ್ಥಿಯಾದ ಸಂಗಣ್ಣ ಅಗಡಿ ಅವರನ್ನು ಕೇವಲ ೪೨೮೧ ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.   
  ೧೯೬೭ ರ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸಂಗಣ್ಣ ಅಗಡಿ ಅವರು ಪಕ್ಷೇತರ ಅಭ್ಯರ್ಥಿ ಶಿವಮೂರ್ತಿ ಸ್ವಾಮಿ ಅಳವಂಡಿ ಅವರಿಗಿಂತ ೨೪೬೦೨ ಹೆಚ್ಚು ಮತಗಳನ್ನು ಗಳಿಸಿ ಆಯ್ಕೆಯಾದರು.  ೧೯೭೧ ರ ಚುನಾವಣೆಯಲ್ಲಿ ಕಾ.ಆ(ಜೆ) ಪಕ್ಷದಿಂದ ಸ್ಪರ್ಧಿಸಿದ ಸಿದ್ರಾಮೇಶ್ವರ ಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಶಿವಮೂರ್ತಿ ಸ್ವಾಮಿ ಅಳವಂಡಿ ಅವರನ್ನು ೧೩೬೬೦೦ ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯಶಾಲಿಯಾದರು.  ೧೯೭೭ ರ ಲೋಕಸಭಾ ಚುನಾವಣೆಯಲ್ಲಿ ಸಿದ್ರಾಮೇಶ್ವರ ಸ್ವಾಮಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಎರಡನೆ ಬಾರಿಗೆ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಸಂಗಣ್ಣ ಅಗಡಿ ಅವರಿಗಿಂತ ೧೨೫೭೭೯ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು.  ೧೯೮೦ ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ (ಇಂದಿರಾ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹೆಚ್.ಜಿ. ರಾಮುಲು ಅವರು  ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ (ಅರಸ್) ಪಕ್ಷದ ಅಭ್ಯರ್ಥಿ ಹೆಚ್.ಆರ್. ಬಸವರಾಜು ಅವರನ್ನು ೧೬೧೮೦೩ ಮತಗಳಿಂದ ಸೋಲಿಸಿ ಆಯ್ಕೆಯಾದರು.  ಮತ್ತೆ ೧೯೮೪ ರಲ್ಲಿ ನಡೆದ ಚುನಾವಣೆಯಲ್ಲಿ ಹೆಚ್.ಜಿ. ರಾಮುಲು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿ ಹೆಚ್. ಪಾಪಾರಾವ್ ವೀರಯ್ಯ ಅವರನ್ನು ೫೭೯೪೬ ಮತಗಳಿಂದ ಪರಾಭವಗೊಳಿಸಿ    ಪುನರಾಯ್ಕೆಯಾದರು.  ಈ ಚುನಾವಣೆಯಲ್ಲಿ ಒಟ್ಟು ೧೧ ಅಭ್ಯರ್ಥಿಗಳು ಕಣದಲ್ಲಿದ್ದರು.  
Please follow and like us:
error

Leave a Reply

error: Content is protected !!