You are here
Home > Koppal News > ಪ್ರೀತಿ -ಪ್ರೇಮ – ಸಹಕಾರದಿಂದ ಬದುಕಿ ಬಾಳುವದೇ ಸ್ವಾತಂತ್ರದ ನಿಜವಾದ ಅರ್ಥ. – ಶಾಸಕ ಹಿಟ್ನಾಳ

ಪ್ರೀತಿ -ಪ್ರೇಮ – ಸಹಕಾರದಿಂದ ಬದುಕಿ ಬಾಳುವದೇ ಸ್ವಾತಂತ್ರದ ನಿಜವಾದ ಅರ್ಥ. – ಶಾಸಕ ಹಿಟ್ನಾಳ

 ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಂಭ್ರಮದ ೬೮ ನೇ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಶಾಸಕರಾದ ರಾಘವೇಂದ್ರ ಹಿಟ್ನಾಳ  ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ  ಭಾರತ ಸರ್ವಜನಾಂಗದ ಶಾಂತಿಯ ತೋಟ.  ಇಲ್ಲಿನ ಜನರು ಪರಸ್ಪರ ಪ್ರೀತಿ ಪ್ರೇಮ ಸಹಕಾರದಿಂದ ಬದುಕಿ ಬಾಳುವದೇ ಸ್ವಾತಂತ್ರದ ನಿಜವಾದ ಅರ್ಥ. ನಮ್ಮ ಮನಸ್ಸುಗಳು ವಿಶಾಲವಾಗಿದ್ದಾಗ ಮಾತ್ರ ನಾವು ನೆರೆಹೊರೆಯ  ಜನರೊಡನೆ  ಸೌಹಾರ್ಧಯುತವಾಗಿ ಬದುಕಲಿಕ್ಕೆ ಸಾಧ್ಯವಾಗುತ್ತದೆ.  ಆ ಮೂಲಕ  ಉತ್ತಮ ಸಂಬಂಧಗಳು ರೂಪಗೊಂಡು ಭಾರತ ಬಲಿಷ್ಠವಾಗಬಲ್ಲದು. ಯುವಕರೆಲ್ಲರೂ ಸೇರಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು. 
           

ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ  ಹುತಾತ್ಮರನ್ನು ಈ ಸಂದರ್ಭದಲ್ಲಿ ಸ್ಮರಿಸುವ ಅಗತ್ಯವಿದೆಯೆಂದರು.  ಪ್ರಾಚಾರ್ಯ ಶಿವಪ್ಪ ಸಾಂತಪ್ಪನವರು  ಮಾತನಾಡಿ ಯುವಕರು ದೇಶದ ಬೆನ್ನೆಲುಬುಗಳಿದ್ದಂತೆ.  ತಾಯಿಯನ್ನು ಪ್ರೀತಿಸಿದಂತೆ ತಾಯಿ ನೆಲವನ್ನು (ಭಾರತ) ಪ್ರೀತಿಸಬೇಕು. ಪಟ್ಟಭದ್ರಹಿತಾಸಕ್ತಿಗಳಿಂದ, ಭಯೋತ್ಪಾದನೆಯಿಂದ  ಈ ದೇಶ ಬಿಡುಗಡೆ ಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ದೇಶಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯ ಎಂದರು. ಉಪನ್ಯಾಸಕರಾದ, ನಟರಾಜ, ಸುರೇಶ ಸೊನ್ನದ, ದ್ವಾರಕಾಸ್ವಾಮಿ, ಗಾಯತ್ರಿ ಭಾವಿಕಟ್ಟಿ, ನಂದಾ ಕಟ್ಟಿಮನಿ, ಶುಭಾ, ಶೋಭಾ, ತಿಮ್ಮಾರೆಡ್ಡಿ ಮೇಟಿ, ಮಹೇಶಮಮದಾಪುರ, , ಅತಿಥಿ ಉಪನ್ಯಾಸಕರಾದ  ವೀರಣ್ಣ ಸಜ್ಜನರ, ಡಾ.ಪ್ರಕಾಶಬಳ್ಳಾರಿ, ರವಿ ಹಿರೇಮಠ, ಮೊದಲಾದವರು, ಶಾರದಾ, ಸೌಮ್ಯ, ತಾರಾಮತಿ, ವಿನೋದ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Top