ವಿವಿಧ ರಸ್ತೆಗಳ ಮೇಲ್ದರ್ಜೆಗೆ ಪ್ರಸ್ತಾವನೆ : ಇಕ್ಬಾಲ್ ಅನ್ಸಾರಿ

: ಕೊಪ್ಪಳ ತಾಲೂಕಿನ ಅಬ್ಬಿಗೇರಿಯಿಂದ ಕಲ್‍ತಾವರಗೇರಾ, ಕೂಕನಪಳ್ಳಿ, ಇಂದರಗಿ, ಗಂಗಾವತಿ ಕ್ರಾಸ್‍ವರೆಗಿನ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಅನುಮೋದನೆ ದೊರೆಯಲಿದೆ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
      ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕೊಪ್ಪಳ ತಾಲೂಕಿನ ಕಲ್ಲತಾವರಗೆರಿಯಲ್ಲಿ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಯೋಜನೆಯಡಿ 78 ಲಕ್ಷ ವೆಚ್ಚದ ಗಿಣಗೇರಿ-ಕೂಕನಪಳ್ಳಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
 
            ಕಲ್‍ತಾವರಗೇರಿಯಿಂದ ಕಾಮನೂರು ವರೆಗಿನ 4 ಕಿ.ಮೀ ರಸ್ತೆ ಡಾಂಬರೀಕರಣ ಹಾಗೂ ಸೇತುವೆ ನಿರ್ಮಾಣ ಒಂದು ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಕ್ಷೇತ್ರದ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿಗಳು ಆರಂಭವಾಗಲಿವೆ ಎಂದರು.  ನಂತರ ನಬಾರ್ಡ್  ಅಡಿಯಲ್ಲಿ 25 ಲಕ್ಷದ ವೆಚ್ಚದಲ್ಲಿ ದನಗಲದೊಡ್ಡಿ- ಕಲ್ಲತಾವರಗೇರಿ ಗ್ರಾಮದವರೆಗಿನ 2 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದರು.  ಅದೇ ರೀತಿ ಇಂದರಗಿ ಗ್ರಾಮದಲ್ಲಿ 64 ಲಕ್ಷ ವೆಚ್ಚದಲ್ಲಿ ಆರ್.ಡಿ.ಪಿ.ಆರ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಹಾಗೂ 70 ಲಕ್ಷ ವೆಚ್ಚದಲ್ಲಿ ಎಸ್.ಟಿ. ಕಾಲೋನಿಯಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.  ತರುವಾಯ ಗಂಗಾವತಿ ನಗರದ ಅಗ್ರಿ ಸ್ಪೋಟ್ರ್ಸ್ ಕ್ಲಬ್ ಹತ್ತಿರದ ಬೈಪಾಸ್ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಬಾರ್ಡ್ ಯೋಜನೆಯಡಿ 01 ಕೋಟಿ ರೂ. ವೆಚ್ಚದಲ್ಲಿ ಎರಡು ಸೇತುವೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
    ಈ ಸಂದರ್ಭದಲ್ಲಿ ಯಮನಪ್ಪ ವಿಠ್ಠಲಾಪೂರ, ಆಶ್ರಯ ಸಮಿತಿಯ ಸದಸ್ಯರಾದ ಖಾಸಿಂಸಾಬ ಗದ್ವಾಲ, ಆರತಿ ತಿಪ್ಪಣ್ಣ, ಸಂಗಮೇಶ ಬಾದವಾಡಗಿ, ಎಸ್.ಬಿ.ಖಾದ್ರಿ, ರಮೇಶ ಪಾಟೀಲ, ಬಸವಕುಮಾರ ಪಟ್ಟಣಶೆಟ್ಟರ, ಕೋಟ್ರೇಶ, ರಾಮಣ್ಣ ಸೂಳಿಕೇರಿ, ಮಲ್ಲೇಶಪ್ಪ ಗುಮಗೇರಿ ಹಾಗೂ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.

Leave a Reply