ಓಜನಹಳ್ಳಿ : ಭಕ್ತಿ ಸಂಗೀತ ಕಾರ್ಯಕ್ರಮ ಯಶಸ್ವಿ

ತಾಲೂಕಿನ ಓಜಿನಹಳ್ಳಿ ಗ್ರಾಮದಲ್ಲಿ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಯುವ ಸಮಿತಿ, ಚೇತನ್ ಸಾಂಸ್ಕೃತಿಕ ಕಲಾ ಸಂಸ್ಥೆ ಇವರ ಸಹಯೋಗದಲ್ಲಿ ಶ್ರೀ ಕರಿಯಮ್ಮದೇವಿ ಪುರಾಣ ಮಂಗಲೋತ್ಸವ ಹಾಗೂ ಕಾರ್ತಿಕೋತ್ಸವದ ಅಂಗವಾಗಿ ಭಕ್ತಿ ಜಾನಪದ ಸಂಗೀತ ಕಾರ್ಯಕ್ರಮವನ್ನು ಮಂಗಳವಾರದಂದು ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವೇ.ಮೂ. ಷಡರಯ್ಯಸ್ವಾಮಿ ಹಿರೇಮಠ ನೆರವೇರಿಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ. ಉಪಾಧ್ಯಕ್ಷ ಹನುಮಪ್ಪ ಚುಕ್ಕನಕಲ್ಲ ವಹಿಸಿದ್ದರು.
ಚೇತನ್ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಮೇಟಿ ನೇತೃತ್ವದಲ್ಲಿ ಭಕ್ತಿ ಸಂಗೀತ ವಚನ ಸಂಗೀತ, ಜಾನಪದ ಸಂಗೀತ, ತತ್ವಪದ ಸಂಗೀತ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.
ಶ್ರೀಶೈಲ ಹಳ್ಳಿಕೇರಿ ಗೊಂಡಬಾಳ, ಭೋಜನಗೌಡ ಸಂಕನಗೌಡ್ರ, ಮಹಾಲಿಂಗನಗೌಡ ಮಾಲಿಪಾಟೀಲ್, ಮಲ್ಲಪ್ಪ ಹೂಗಾರ, ಹೆಚ್. ಈಶಪ್ಪ ಮಾಸ್ತರ ಬೆಟಗೇರಿ, ನಿಂಗಪ್ಪ ಮೆತಗಲ್ಲ, ದೊಡ್ಡಸಿದ್ದಪ್ಪ ಮೇಟಿ, ಶುಭಾಷ ಮೇಟಿ, ಹನುಮಂತ ಮೋಟಿ, ಮಲ್ಲಿಕಾರ್ಜುನ ಮುಧೋಳ, ನೀಲಪ್ಪ ಮೋಟಿ, ಹುಸೇನಪಾಷಾ ಟೇಲರ, ಗ್ಯಾನೇಶ ಬಡಿಗೇರ, ಮತ್ತಿತರರು ಭಾಗವಹಿಸಿದ್ದರು

Leave a Reply