ಬಡ್ತಿ ಮಿಸಲಾತಿ ಆದೇಶ ಶೀಘ್ರ ಜಾರಿಗೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ.

ಕೊಪ್ಪಳ- ಸುಪ್ರಿಂಕೋರ್ಟನ ಆದೇಶದಂತೆ ಸರ್ಕಾರಿ ಅಂಗವಿಕಲ ನೌಕರರಿಗೆ ಬಡ್ತಿಯಲ್ಲಿ ಶೇಕಡಾ ೩ ರಷ್ಟು ಮಿಸಲಾತಿ ಆದೇಶವನ್ನು ರಾಜ್ಯ ಸರ್ಕಾರವು ಶೀಘ್ರ ಜಾರಿಗೊಳಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯ ಸುವರ್ಣ ಸೌಧದ ಎದುರುಗಡೆಯಲ್ಲಿ ಜು.೩ ರಂದು ಬೆಳಗ್ಗೆ ೧೦ ಘಂಟೆಗೆ ಸರ್ಕಾರಿ ಅಂಗವಿಕಲ ನೌಕರರ ಸಂಘದಿಂದ ಒಂದು ದಿನದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ರಾಜ್ಯದ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಂಗವಿಕಲ ನೌಕರರು ತಮ್ಮ ಹಕ್ಕಿನ ರಜೆಯನ್ನು ಹಾಕಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಹಾಗೂ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ ಮನವಿ ಮಾಡಿದ್ದಾರೆ.

Leave a Reply